ಕಾರವಾರ : ಕರಾವಳಿಯಲ್ಲಿ ಕಡಲು ಅಬ್ಬರಿಸುತ್ತಿದೆ. ತೀರದ ನಿವಾಸಿಗಳ ಆತಂಕ ಹೆಚ್ಚಾಗುತ್ತಿದೆ. ಹವಾಮಾನ ವೈಪರಿತ್ಯಕ್ಕೆ ಸಮುದ್ರ ರೌದ್ರಾವತಾರ ತಾಳಿ ಅಲ್ಲಲ್ಲಿ ಆಪೋಶನ ತೆಗೆದುಕೊಳ್ಳುತ್ತಿದೆ.

ಕಾರವಾರದ ದೇವಭಾಗ ಜಂಗಲ್ ಲಾಡ್ಜಸ್ ನ ರೆಸಾರ್ಟ್ ಈಗ ಸಮುದ್ರದ ಬಾಯಿಗೆ ಸಿಲುಕಿದೆ. ಇಲ್ಲಿರುವ ಐದು ಕಟ್ಟಡಗಳು ಸಮುದ್ರಕ್ಕೆ ಆಹುತಿಯಾಗಿದೆ. ಕಳೆದೊಂದು ವಾರಗಳಿಂದ ಸಮುದ್ರ ತನ್ನ ಕಬಂಧಬಾಹುವನ್ನ ಚಾಚುತ್ತ ಬರುತ್ತಿದೆ.

ಪರಿಣಾಮವಾಗಿ ಅರಣ್ಯ ಇಲಾಖೆ ಮಾಡಿದ ನೆಡುತೋಪುಗಳು ಸಮುದ್ರ ನಾಶ ಮಾಡಿದೆ. ದೊಡ್ಡ ದೊಡ್ಡದಾದ ಮರಗಳು ಕಡಲಲ್ಲಿ ಬಿದ್ದಿವೆ. ಸಮುದ್ರದ ಭರತದ ಸಂದರ್ಭದಲ್ಲಿ ಭೀಕರ ವಾತಾವರಣ ಭಯ ಹುಟ್ಟಿಸುತ್ತಿದೆ. ಪ್ರವಾಸಿಗರ ಹಾಟ್ ಸ್ಪಾಟ್ ಸ್ಥಳ ದೇವಭಾಗ ರೆಸಾರ್ಟ್ ಬೀಚ್ ನೆಲಸಮವಾಗುತ್ತಿದ್ದು ಬಾರೀ ಪ್ರಮಾಣದ ಹಾನಿಯಾಗಿದೆ.