ಬೆಂಗಳೂರು : ಬಿಜೆಪಿಯ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರನ್ನಾಗಿ  ಉದ್ಯಮಿ ಸುನೀಲ ಸೋನಿ (ನಾಯ್ಕ) ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವಾಯ್. ವಿಜಯೇಂದ್ರ ಅವರ ಸೂಚನೆಯ ಮೇರೆಗೆ ಪಂಚಾಯತ ಪ್ರಕೋಷ್ಠದ ಸಂಚಾಲಕ ಹನುಮಂತರಾವ್ ಜವಳಿ ನೇಮಕಮಾಡಿ ಆದೇಶಿಸಿದ್ದಾರೆ.

ಶಿವಮೊಗ್ಗಾ ವಿಭಾಗಕ್ಕೆ ಸೇರಿದ ಈ ಹುದ್ದೆಯಲ್ಲಿ ಸುನೀಲ ಸೋನಿಯವರಿಗೆ ಇನ್ನುಳಿದ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪಂಚಾಯತ್ ವ್ಯವಸ್ಥೆಯ ಪ್ರಕೋಷ್ಠದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆಯಲ್ಲಿ ಸ್ಥಳೀಯ ಬಿಜೆಪಿ ಘಟಕದ ಸಹಕಾರದಲ್ಲಿ ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ. ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಪಂಚಾಯತ ಪ್ರಕೋಷ್ಠದ ಮೂಲಕ ಕಾರ್ಯ ನಿರ್ವಹಿಸುವ ಪ್ರಮುಖ ಉದ್ದೇಶ ಹೊಂದಿದೆ.

ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುವ ಮತ್ತು ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವರಿಗೆ ಜವಾಬ್ದಾರಿ ನೀಡಲಾಗಿದೆ.