Rain Effect. ಹೊನ್ನಾವರ : ಬಾರೀ ಮಳೆಯಿಂದಾಗಿ ಹೊನ್ನಾವರ-ಬೆಂಗಳೂರು  ರಾಷ್ಟ್ರೀಯ ಹೆದ್ದಾರಿ 69ರಲ್ಲಿ (NH-69) ಭೂಕುಸಿತ ಉಂಟಾಗಿದೆ.

ಹೊನ್ನಾವರ ತಾಲೂಕಿನ ಖರ್ವಾ‌ ಕ್ರಾಸ್ (KHARVA CROSS) ಬಳಿ ಈ ಅವಘಡ ಸಂಭವಿಸಿದೆ. ಕಳೆದ ಕೆಲ ದಿನಗಳ ಹಿಂದೆ ಇದೆ ಪ್ರದೇಶದಲ್ಲಿ ಗಿಡ-ಮರ ಧರೆಗಿಳಿದು ಬಂದಿತ್ತು. ಈಗ ಮತ್ತೆ ಕುಸಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಘಟನೆಯಿಂದ ಹೊನ್ನಾವರ-ಸಾಗರ-ಬೆಂಗಳೂರು (HONNAVAR-SAGAR-BANGLORE) ಸಂಚಾರ ಅಸ್ತವ್ಯಸ್ತವಾಗಿದೆ. ಹೆದ್ದಾರಿಯ ಒಂದು ಬದಿಯಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ತಿಂಗಳಲ್ಲಿ ಈ ಹೆದ್ದಾರಿಯಲ್ಲಿ ನಾಲ್ಕನೇ ಕುಸಿತದ ಘಟನೆಯಾಗಿದೆ.