ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು(Agasuru) ಕಂಚಿನಬಾಗಿಲ ಬಳಿ ಬೆಳಗ್ಗೆ ಗಂಭೀರ ಅಪಘಾತ ಸಂಭವಿಸಿದೆ. ಮಿಥೆನಾಲ್(Mithenal) ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ–58ರಲ್ಲಿ(NH 58) ಸಂಚಾರ ವ್ಯತ್ಯಯಗೊಂಡಿದೆ.
ಗುಜರಾತಿನ(Gujarat) ಕಲೋಜ್‌ನಿಂದ ಹೆಬ್ರಿ ವಿಶ್ವಾಸನಗರಕ್ಕೆ(Hebri Vishwasnagar) ತೆರಳುತ್ತಿದ್ದ ಟ್ಯಾಂಕರ್ ತೀವ್ರ ವೇಗದಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದಿದೆ. ಮಿಥೆನಾಲ್ ದಹನಶೀಲ ಪದಾರ್ಥವಾಗಿರುವುದರಿಂದ ಅಪಾಯದ ಸಾಧ್ಯತೆ ತಪ್ಪಿಸಲು ಸ್ಥಳಕ್ಕೆ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಧಾವಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ಅಂಕೋಲಾ–ಹಿಲ್ಲೂರು–ವಾಸರ–ಕುದ್ರಿಗೆ ಮಾರ್ಗದ ಮೂಲಕ ವಾಹನಗಳಿಗೆ ಪರ್ಯಾಯ ಮಾರ್ಗ ಒದಗಿಸಲಾಗಿದೆ. ಪಲ್ಟಿಯಾದ(Overturned) ಸ್ಥಳದ ಬಳಿ ಯಾವುದೇ ವಾಹನ ಸಂಚರಿಸದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸ್ಥಳಕ್ಕೆ ಅಂಕೋಲಾ(Ankola) ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಸ್ಥಳದಲ್ಲಿ ತುರ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ವಿನಂತಿಸಲಾಗಿದೆ.
ಸಂಜೆ ವೇಳೆ ಸಂಬಂಧಪಟ್ಟ ತಜ್ಞರು(Experts) ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪಲ್ಟಿಯಾದ ಟ್ಯಾಂಕರ್ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
ಇದನ್ನು ಓದಿ : ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ. ಬ್ಯಾಂಕ್ ದರೋಡೆ ಆರೋಪಿಯಿಂದ ಆತ್ಮಹತ್ಯೆಗೆ ಯತ್ನ.
ಟೆಂಪೋ–ಡಂಪರ್ ಲಾರಿ ನಡುವೆ ಅಪಘಾತ. ನಾಲ್ವರಿಗೆ ಗಂಭೀರ ಗಾಯ.
ಗಂಡನೊಂದಿಗೆ ಬಂದ ವಿದೇಶಿ ಮಹಿಳೆ ಅಪಾಯದಲ್ಲಿ. ಲೈಪ್ ಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ.
ಭಟ್ಕಳ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ. ಗೋ ಕಳ್ಳತನ ಮಾಡಿದ್ದ ಇಬ್ಬರ ಆರೆಸ್ಟ್.
