ಮುಂಡಗೋಡ (Mundgod) : ಪಶ್ಚಿಮ ವಲಯ ಐಜಿಪಿಯಾಗಿ(IGP) ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಬಾರಿಗೆ ಅಮೀತ ಸಿಂಗ್ ಮುಂಡಗೋಡ ಪೊಲೀಸ ಠಾಣೆಗೆ (Mundgod Police Station) ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ಮುಂಡಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಪತ್ತೆ ಮಾಡಿದ ಮೊಬೈಲ್ ಗಳನ್ನ ಐಜಿಪಿಯವರು ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದ ಅಂಗಡಿ ಮುಗ್ಗಟ್ಟುಗಳ ಮಾಲಿಕರು ತಮ್ಮ ತಮ್ಮ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಸರಿಯಾದ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಬಾಚಣಿಕಿ(Bachanaki) ಹಾಗೂ ಮಳಗಿ ಜಲಾಶಯದಲ್ಲಿ(Malagi Dam) ಯಾವುದೇ ಎಚ್ಚರಿಕೆ ಫಲಕಗಳು, ಮುಂಜಾಗ್ರತ ಕ್ರಮಗಳನ್ನ ಸಂಬಂಧಿಸಿದ ಇಲಾಖೆಗಳು ಕೈಗೊಳ್ಳದೇ ಇರುವುದರಿಂದ ಸಾವು ಸಂಭವಿಸುತ್ತಿರುತ್ತದೆ. ತಾವು ದೊಡ್ಡಮಟ್ಟದಲ್ಲಿ ಆಯಾ ಇಲಾಖೆಗೆ ತಿಳಿಸಬೇಕೆಂದು ಮಾಧ್ಯಮದವರು ಐಜಿಪಿ ಅವರ ಗಮನಕ್ಕೆ ತಂದಾಗ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ತಾಲೂಕಿನಲ್ಲಿ ಗಾಂಜಾ ಡ್ರಗ್ಸ್ ಹಾಗೂ ಮೀಟರ್ ಬಡ್ಡಿ ಹಾವಳಿ ಇದ್ದರೆ ತಿಳಿಸಿ. ಬಡ್ಡಿಯಿಂದ ದುಡ್ಡು ಪಡೆದಿದ್ದರೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿ ಅವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮಕೈಗೊಳ್ಳುತ್ತವೆ ಎಂದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ಹೊಡೆ ಬಡೆ ಮಾಡುತ್ತೇವೆ ಎಂದು ಜೀವಬೇದರಿಕೆ ಹಾಕುತ್ತಾರೆ. ಇದರಿಂದ ಕಂಪ್ಲೇಟ್ ಕೊಡಲು ಮುಂದೆ ಬರುತ್ತಿಲ್ಲಾ ಎಂದು ಎಸ್.ಪಿಯವರ ಗಮನಕ್ಕೆ ತರಲಾಯಿತು.
ಐಜಿಪಿ ಅಮೀತ ಸಿಂಗ್ ಕ್ಯಾಂಪ್‌ಗೆ ಭೇಟಿ ನೀಡಿದಾಗ ಅಲ್ಲಿಯ ಬೌದ್ಧಭಿಕ್ಕುಗಳು ನಾವು ಸಂಚಾರ ಮಾಡುವ ಕ್ಯಾಂಪ್ ಎದುರಿನ ರಸ್ತೆ ಅಂದರೆ ಯಲ್ಲಾಪುರ-ಮುಂಡಗೋಡ ರಸ್ತೆಯಲ್ಲಿ (Yallapura-Mundgod Road) ಎಮ್‌ಎಸ್‌ಐಎಲ್(MSIL) ಮದ್ಯದ ಅಂಗಡಿ ತೆರೆಯಲಾಗುತ್ತಿದೆ ಎಂದು ಸುದ್ದಿ ಕೇಳಿ ಭಯಭೀತರಾಗಿದ್ದೇವೆ. ಅವರು ಮದ್ಯದ ಅಂಗಡಿ ತೆರೆದರೆ ನಮಗೆ ಬಹಳಷ್ಟು ಅನಾನುಕೂಲವಾಗಲಿದೆ. ನಾವು ಅಲ್ಲಿಂದ ಸಂಚರಿಸುವುದೆ ದುಸ್ತರವಾಗುತ್ತದೆ. ಅಂಗಡಿ ತೆರೆದರೆ ನಮಗೆ ನಾವು ವಾಕಿಂಗ್ ಹೋಗಲು ಸಾಧ್ಯವಿಲ್ಲ. ಆದ್ದರಿಂದ ತಾವು ಅದನ್ನು ತಡೆಯಬೇಕು ಎಂದು ಅಲ್ಲಿ ಬೌದ್ಧ ಸನ್ಯಾಸಿಗಳು ಅವಲತ್ತುಕೊಂಡಾಗ ನಾನು ಈ ಕುರಿತು ಸಂಬಂಧಿಸಿ ಇಲಾಖೆ ಮುಖ್ಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಹಾಗೂ ಆದಷ್ಟು ಎಮ್.ಎಸ್.ಐಎಲ್ ತೆರೆಯದಂತೆ ನೋಡಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ಪಿ ನಾರಾಯಣ ಎಂ. ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್., ಮುಂಡಗೋಡ ಸಿಪಿಐ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ, ಪಿಎಸ್‌ಐ ಕುಡಗುಂಟಿ ಸೇರಿದಂತೆ ಮುಂತಾದ ಸಿಬ್ಬಂದಿ ವರ್ಗ ಉಪಸ್ಥಿರಿದ್ದರು.
ಇದನ್ನು ಓದಿ : ದಾಂಡೇಲಿಯಲ್ಲಿ ಹೊತ್ತಿ ಉರಿದ ದ್ವಿಚಕ್ರ ವಾಹನ
ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ