ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar):  ಹೊನ್ನಾವರದ ಸಾಲ್ಕೋಡು ಘಟನೆಯನ್ನ ಭಟ್ಕಳದ ಪರಮೋಚ್ಚ ಸಂಘಟನೆ ಮಜ್ಲಿಸೆ ಇಸ್ಲಾಹೋ ತಂಜಿಮ್(Tanzeem) ಸಂಸ್ಥೆ ಖಂಡಿಸಿದೆ.

ಗುರುವಾರ ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ತಂಜಿಮ್ ಸಂಸ್ಥೆಯ ಮುಖಂಡರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಮಾತನಾಡಿ, ನಾವು ಗೋಮಾಂಸ ತಿನ್ನುತ್ತೇವೆ, ಆದರೆ ಕದ್ದ ಗೋಮಾಂಸ ತಿನ್ನಲ್ಲ.  ಕಳ್ಳತನ ಮಾಡಿದ ಗೋಮಾಂಸ ತಿನ್ನೋದು ನಮ್ಮ ಧರ್ಮದಲ್ಲಿ ಅಪರಾಧವಾಗಿದೆ.  ಹೊನ್ನಾವರದ ಸಾಲ್ಕೋಡು(Honnavar Salkodu) ಘಟನೆಯಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಬೇಕು. ಅವರು ಯಾವ ಜಾತಿ ಧರ್ಮದವರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು. ಭಾಗಿಯಾದ ಆರೋಪಿಗಳ ಹೆಸರಿನ ಮುಂದೆ ಊರು ನಮೂದಿಸದೆ ಅವರ ಖಾಮ್ದನ್ ಹೆಸರಿಸಿ. ಈಗಾಗಲೇ ಭಟ್ಕಳ(Bhatkal) ಹೆಸರು ಹಾಳಾಗಿದೆ. ಇನ್ನೂ ಹಾಳು ಮಾಡೋದು ಬೇಡ ಎಂದರು.

ದನಕಳ್ಳತನ ಪ್ರಕರಣ ನಮ್ಮ ಜಿಲ್ಲೆಯಲ್ಲಿ ಇದೆ ಮೊದಲಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ದನಕಳ್ಳತನ ಆಗಿದೆ. ಬಿಜೆಪಿ ಶಾಸಕ ದಿನಕರ ಶೆಟ್ಟಿ ಸಿಎಂ, ಮತ್ತು ಗೃಹ ಸಚಿವರ ಬಗ್ಗೆ ಲಘುವಾಗಿ ಹೇಳಿಕೆ ಕೊಡುತ್ತಿದ್ದಾರೆ. ದಿನಕರ ಶೆಟ್ಟಿಯವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಸಂಸ್ಥೆಯ ಸಂಚಾಲಕ ಇಮ್ರಾನ್ ಲಂಕಾ ಮಾತನಾಡಿ, ಹಿಂದೆ ನಡೆದ ಗೋ ಕಳ್ಳತನದಲ್ಲಿ ಎಲ್ಲಾ ಧರ್ಮ ಜಾತಿಯವರು ಭಾಗಿಯಾಗಿದ್ದಾರೆ. ಕೇವಲ ಒಂದೇ ಧರ್ಮದವರಿಲ್ಲ. ಸಾಲ್ಕೋಡು ಘಟನೆಗೆ ಸಂಬಂಧಿಸಿವವರು ಭಟ್ಕಳದವರಲ್ಲ ಎಂದ ಅವರು ಸಾಲ್ಕೋಡು ಘಟನೆಯಲ್ಲಿ(Salkodu Incident) ಆರೋಪಿಗೆ ಗುಂಡು ಹೊಡೆಯೋ ಪರಿಸ್ಥಿತಿ  ಬರಬಾರದಿತ್ತು. ಎರಡು ಕಡೆಯಿಂದ ಪ್ರತಿಕ್ರಿಯೆ ನಡೆದಿದೆ. ಗೋ ಹತ್ಯೆಗೆ ಸಂಬಂಧಿಸಿ ಎಸ್ಪಿ (SP) ಜೊತೆ ಸಭೆ ಮಾಡಿದ್ದೇವೆ. ಗೋ ಕಳ್ಳತನ ಕೃತ್ಯ ತಡೆಯಲು ಇಲಾಖೆಯೊಂದಿಗೆ ನಾವು ಕೈ ಜೋಡಿಸುತ್ತೇವೆ. ನಾವು ಜಿಲ್ಲೆಯನ್ನ ಕಟ್ಟೋದಕ್ಕೆ  ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ತಂಜಿಮ್ ಕಾರ್ಯದರ್ಶಿ ಅಬ್ದುಲ್ ರಖಿಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನು ಓದಿ : ಗೋ ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿ ಬಂಧನ.

  10 ದಿನಗಳಲ್ಲಿ 10 ಕೋಟಿ ರೂ ಆದಾಯ! ಕುಂಭಮೇಳದಿಂದ ಊರಿಗೆ ಹೋದವಳ ಮ್ಯಾಜಿಕ್.

ಹುಲಿ ಮೂತ್ರಕ್ಕೆ ಬೇಡಿಕೆ. ಮೃಗಾಲಯದಲ್ಲಿ ತಯಾರಾಯ್ತು ಔಷಧ.

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ. ಒಂಬತ್ತು ಭಾರತೀಯರ ದುರ್ಮರಣ.