ಅಂಕೋಲಾ : ತಾಲೂಕಿನ ಶಿರೂರು ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿ ಈಗಾಗಲೇ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಇನ್ನೂ ನಾಲ್ವರಿಗಾಗಿ ಶೋಧ ನಡೆಸಲಾಗಿದೆ.
ಹೇಗಾದರೂ ಮಾಡಿ ನಾಪತ್ತೆಯಾದವರ ಶೋಧ ನಡೆಸಿ ಪತ್ತೆ ಮಾಡಬೇಕೆಂದು ಕಾರವಾರ ಶಾಸಕ ಸತೀಶ್ ಸೈಲ್ ಪಣ ತೊಟ್ಟಿದ್ದಾರೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಇತಾಚಿ ಬೂಮರ್ ತರಿಸಿ ಕಾರ್ಯಾಚರಣೆ ಶುರು ಮಾಡಿಸಿದ್ದಾರೆ. ಗೋಕಾಕ್ ನಿಂದ ಪೊಕ್ ಲೈನ್ ಬಂದಿದ್ದು ನದಿಯೊಳಗೆ ಮಣ್ಣನ್ನ ತೆಗೆದು ಕಾರ್ಯಾಚರಣೆ ಮಾಡಲಾಗುತ್ತದೆ. ಸುಮಾರು 60 ಅಡಿ ಉದ್ದದ ಪೊಕ್ ಲೈನ್ ಬಳಸಿ ಕಾರ್ಯಾಚರಣೆ ಮಾಡುವ ಬಗ್ಗೆ ಸತೀಶ್ ಸೈಲ್ ಹೇಳಿದ್ದಾರೆ.
ಹೀಗಾಗಿ ಕೇರಳ ಮೂಲದ ಚಾಲಕನ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಕೇರಳದ ರೆಸ್ಕ್ಯೂ ತಂಡ ಶೋಧ ನಡೆಸಿ ಬೇಸರಗೊಂಡಿದೆ. ತಮ್ಮ ಸ್ವಂತ ಖರ್ಚಿನಿಂದ ಶಾಸಕ ಸೈಲ್ ಉದ್ದದ ಪೋಕ್ ಲೈನ್ ತರಿಸಿದ್ದಾರೆ. ಹೀಗಾಗಿ ನದಿಯಲ್ಲಿ ಕಾರ್ಯಾಚರಣೆ ಇನ್ನಷ್ಟು ಚುರುಕಾಗಬಹುದು.