ಶಿರಸಿ(SIRSI) ::ಗಣೇಶೋತ್ಸವ (GANESHOTSAVA) ಸಂದರ್ಭದಲ್ಲಿ ಯಾವುದೇರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಶಿರಸಿ ನಗರದ ವಿವಿಧ ಕಡೆ ಪ್ರತಿಷ್ಟಾಪಿಸಿದ ಗಣೇಶ ಉತ್ಸವ ನಡೆಯುವ ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕಾಡ್ (BOMB SQUAD) ಮತ್ತು ಡಾಗ್ ಸ್ಕಾಡ್ (SQUAD) ಪರಿಶೀಲನೆ ನಡೆಸಿತು. ಶಿರಸಿಯ ದೇವಿಕೆರೆ, ಮಾರಿಗುಡಿ, ಆಟೋ ನಿಲ್ದಾಣ, ರಾಮನಬೈಲ್ ಹೀಗೆ ವಿವಿಧ ಕಡೆಗಳಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಸ್ಥಳಗಳಲ್ಲಿ ತಪಾಸಣೆ ನಡಸಿದೆ.

ಜಿಲ್ಲೆಯಲ್ಲಿ ಐದು ದಿನಗಳ ಗಣೇಶೋತ್ಸವ ಅದ್ದೂರಿಯಿಂದ ನಡೆದಿದ್ದು, ಇಂದು ಕೆಲ ಕಡೆಗಳಲ್ಲಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಬಾಂಬ್ ತಪಾಸಣಾ ದಳದಲ್ಲಿ ಆನಂದ್ ನಾಯಕ್ ,ಸೇಷು ಪೂಜಾರಿ,  ಸಂತೋಷ್ ನಾಯಕ್, ವಿದ್ಯಾಧರ್ ಗೌಡ ಹಾಗು ಮಾಬ್ಲು ಗೌಡ ಇತರರು ಒಳಗೊಂಡಿದ್ದಾರೆ.

ಇದನ್ನು ಓದಿ : ನೌಕಾಪಡೆಯಲ್ಲಿ ರಾರಾಜಲಿಸಲಿದೆ karavaliya ಹೆಸರು.

ಶಿರೂರು ದುರಂತದಲ್ಲಿ ನಾಪತ್ತೆಯಾದವನ ಇನ್ನೋರ್ವ ಮಗಳಿಗೆ ಕೈಗಾದಲ್ಲಿ ಉದ್ಯೋಗ