ಗೋಕರ್ಣ (GOKARN): ಯಾವುದೇ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಗೋಕರ್ಣ ಠಾಣೆ ಪೊಲೀಸರು(GOKARN POLICE) ಬಂಧಿಸಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಹೋಟೆಲ್ ಕುಕ್ ಕೆಲಸ ಮಾಡುವ ಗೋವಾದ ರಾಜುಸಿಂಗ್ ಮಾನಸಿಂಗ್ (53) ಬಂಧಿತ ವ್ಯಕ್ತಿಯಾಗಿದ್ದಾನೆ.
ಈತ ಸುಮಾರು ಆರು ಲಕ್ಷ ರೂ. ಮೌಲ್ಯದ 975 ಗ್ರಾಂ ತೂಕದ ಚರಸ್ ಮಾದಕ ಪದಾರ್ಥವನ್ನು ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡಗೇರಿ ಗ್ರಾಮದ ಬಿದ್ರಗೇರಿ ಕ್ರಾಸ್‌ನಲ್ಲಿ ಸಿಪಿಐ ವಸಂತ್ ಆಚಾರ್, ಪಿ.ಎಸ್.ಐ ಖಾದರ್ ಬಾಷಾ, ಎ.ಎಸ್.ಐ ನಿರಂಜನ್ ನಾಯಕ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್ ಹೆಚ್ ನಾಯ್ಕ, ವಸಂತ್ ನಾಯ್ಕ ತನೇಶ್ ಗಾವಡಿ ಅವರ ತಂಡವು ಬಂಧಿಸಿದೆ.
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಾಂಜಾ ಸಾಗಾಟ/ಮಾರಾಟ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಮ್ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ ಜಯಕುಮಾರ್ ಮತ್ತು ಎಮ್ ಜಗದೀಶ, ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಹೇಶ್ ಕೆ.ಎಮ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿತ್ತು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ನಗರದ ಗುಡ್ಡಳ್ಳಿಗೆ ಗುಡ್ ಹೇಳೋರು ಯಾರು?