ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಣ್ಣಿಗೇರಿ (Annigeri ) : ತಾಲೂಕಿನ ನಲವಡಿ ಗ್ರಾಮದ ಮಲ್ಲವ್ವ ನಿಂಗಪ್ಪ ನಾಯ್ಕರ ಅವರು ಜುಲೈ ನಾಲ್ಕರಂದು ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಹುಡೇದ ಓಣಿಯ ನಾಯ್ಕರ ಕುಟುಂಬದ ಮಲ್ಲವ್ವ ಅವರು ಪ್ರತಿನಿತ್ಯವೂ ತಮ್ಮ ಮನೆಯ ಕೆಲಸದ ಜೊತೆಗೆ ಜಮೀನಿನ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಶುಕ್ರವಾರದಂದು ಮುಂಜಾನೆ ಎದ್ದು ತಮ್ಮ ನಿತ್ಯದ ಕೆಲಸಕ್ಕೆ ಅಣಿಯಾಗುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು ಹಠಾತ್ ಹೃದಯಾಘಾತಕ್ಕೆ ಒಳಗಾದರು. ವೈದ್ಯರನ್ನ ಕರೆತರುವಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ
ಮಲ್ಲವ್ವ ಅವರು ನವಲಗುಂದ ತಾಲೂಕು ಇರುವಾಗ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಪ್ಪ ನಾಯ್ಕರ ಅವರ ಸಹೋದರನ ಪತ್ನಿಯಾಗಿದ್ದಾರೆ. ಮೃತರು ಪತಿ ನಿಂಗಪ್ಪ, ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಜುಲೈ 8ರಂದು ಅವರ ಮನೆಯಲ್ಲಿ ಶಿವಗಣಾರಾಧನೆ ನಡೆಯಲಿದೆ. ಬಂಧು ಬಾಂಧವರು ಕಾರ್ಯದಲ್ಲಿ ಪಾಲ್ಗೊಂಡು ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಹುಡೇದ ಓಣಿಯ ನಾಯ್ಕರ್ ಕುಟುಂಬದವರು ವಿನಂತಿಸಿದ್ದಾರೆ.
ಇದನ್ನು ಓದಿ : ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಸೇನಾ ವೈದ್ಯ.