ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಚಲಿಸುತ್ತಿದ್ದ ಸರ್ಕಾರಿ ಬಸ್(Government Bus) ತಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾದ ಘಟನೆ ತಾಲೂಕಿನ ಮುರ್ಡೇಶ್ವರ(Murdeshwar) ಬಳಿ ಮದ್ಯಾಹ್ನ ನಡೆದಿದೆ.
ಭಟ್ಕಳದಿಂದ ಕುಮಟಾ(Bhatkal to Kumta) ಕಡೆ ತೆರಳುತ್ತಿರುವ ಕೆಎಸ್ಆರ್ಟಿಸಿ ಬಸ್ (KA 31 F 14ಬಸ್()ನಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು, ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಮುರ್ಡೇಶ್ವರದ ಮಾವಳ್ಳಿ2 ಗ್ರಾಮ ಪಂಚಾಯತ್(Murdeshwar Mavalli2 Gramapanchayat) ಸಮೀಪ ಬರುತ್ತಿರುವ ವೇಳೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಗಾಬರಿಯಾಗಿ ಕೆಳಕ್ಕೆ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆ ಬಸ್ ತಳಭಾಗದಲ್ಲಿ ಅಗ್ನಿ ಆವರಿಸುತಿತ್ತು. ಹೀಗಾಗಿ ಬೈಲೂರಿನ ಆಟೋ ಚಾಲಕ(Bailuru Auto Driver) ಮಂಜುನಾಥ ಮೊಗೇರ ಎಂಬುವವರು ತಮ್ಮ ಜೀವದ ಹಂಗು ತೊರೆದು ಗಿಡಗಳ ಸೊಪ್ಪಿನಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಕೊನೆಗೂ ಹರಸಾಹಸದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಳಿದುಕೊಂಡಿದ್ದ ಪ್ರಯಾಣಿಕರು ಕೊಂಚ ಸಹಾಯ ಮಾಡಿದ್ದರು.
ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ಆಟೋ ಚಾನಕನೋರ್ವನ ಸಾಹಸದಿಂದಾಗಿ ಬೆಂಕಿ ನಂದಿಸಲಾಗಿದೆ. ಅಗ್ನಿ ಅವಘಢಕ್ಕೆ ಸಂಪೂರ್ಣ ತುತ್ತಾಗಬೇಕಿದ್ದ ಬಸ್ ಉಳಿದುಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವೆವಿದ್ದು , ಸಂಬಂಧಪಟ್ಟ ಕೆಎಸ್ಆರ್ಟಿಸಿ ಅಧಿಕಾರಿಗಳು ಮುಂದೆ ಸರಿಯಾಗಿ ಬಸ್ ನಿರ್ವಹಣೆ(Bus Maintenance) ಮಾಡಿದ್ರೆ ಪ್ರಯಾಣಿಕರ ಜೀವ ಉಳಿಯಬಹುದು. ಇಲ್ಲದಿದ್ದಲ್ಲಿ ದೇವರೇ ಗತಿ.
ಇದನ್ನು ಓದಿ : ಭಟ್ಕಳ ಪೊಲೀಸರ ಕಾರ್ಯಾಚರಣೆ. ನಕಲಿ ದಾಖಲೆ ಕೊಟ್ಟು ಜಾಮೀನು ಕೊಡಿಸುತ್ತಿದ್ದ ಆಸಾಮಿ ಬಂಧನ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಗೆ ಬೆಂಕಿ. ಸ್ಥಳದಲ್ಲಿ ಆತಂಕ. ವಾಹನ ಸಂಚಾರ ಅಸ್ತವ್ಯಸ್ತ.

