ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕಾರವಾರ(Karwar) : ನಗರದ ರಾಷ್ಟ್ರೀಯ ಹೆದ್ದಾರಿ 66ರ(NH 66) ಬಿಲ್ಟ್ ಸರ್ಕಲ್ ಬಳಿ‌ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ(Fire) ತಗುಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಸಂತೋಷಿ ಸತೀಶ ಚಿಪ್ಕರ್ ಎಂಬುವವರಿಗೆ ಸೇರಿದ ವಾಹನ(Vehicle) ಇದಾಗಿದ್ದು, ಮನೆಯಲ್ಲಿ ಕೃಷ್ಣ ಮೂರ್ತಿ ಪ್ರತಿಷ್ಟಾಪನೆ ಇದ್ದುದರಿಂದ ಹೆದ್ದಾರಿಯ ಪಕ್ಕದಲ್ಲಿ ವಾಹನ ನಿಲ್ಲಿಸಲಾಗಿತ್ತು. ಮಧ್ಯಾಹ್ನ ಬಿಸಿಲಿನ ತಾಪ(Temparature) ಅಧಿಕವಾಗಿದ್ದರಿಂದ ವಾಹನಕ್ಕೆ ಬೆಂಕಿ ತಾಗಿದೆ.

ಶಾರ್ಟ್ ಸರ್ಕ್ಯೂಟ್ ಅಥವಾ ಆಕಸ್ಮಿಕ ಬಿಸಿಲಿಗೆ ‌ಬೆಂಕಿ ತಾಗಿದ್ದರಿಂದ ಅನಾಹುತ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಪ್ರತಿ ದಿನ‌ ಕಾರವಾರಕ್ಕೆ ಹಾಲನ್ನ(Karwar Milk) ಪೂರೈಸುವ ವಾಹನವಾಗಿದ್ದು. ಕೆಲ ದಿನಗಳಿಂದ ‌ಯಾವುದೇ ರೀತಿಯಲ್ಲೂ ಸರಕು‌ ಸಾಗಾಟ(Goods Supply) ಮಾಡುತ್ತಿರಲಿಲ್ಲ ಎನ್ನಲಾಗಿದೆ.

ವಾಹನಕ್ಕೆ ಬೆಂಕಿ(Vehicle Fire) ಬಿದ್ದಿದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ‌ ಬಿದ್ದ ತಕ್ಷಣ ಸ್ಥಳದಲ್ಲಿದ್ದವರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಕಾರವಾರ ಟ್ರಾಫಿಕ್ ಪೊಲೀಸರು(Karwar Traffic Police) ಆಗಮಿಸಿ ಸಂಚಾರ ಸುಗಮಗೊಳಿಸಿದರು. ನಂತರ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಬೆಂಕಿ‌ ಅನಾಹುತದಲ್ಲಿ ವಾಹನದ ಎಂಜಿನ್‌ ಸೇರಿದಂತೆ ಬಹುತೇಕ ಸುಟ್ಟು ಕರಕಲಾಗಿದೆ.

ಇದನ್ನು ಓದಿ : ಶಾಸಕ ಸತೀಶ್ ಸೈಲ್ ಜಾಮೀನು ರದ್ದು. ಮತ್ತೆ ಜೈಲು‌ ಸೇರುವ ಸಾಧ್ಯತೆ.

ಲಿಪ್ಟ್ ಕೆಳಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು. ಮುರ್ಡೇಶ್ವರದ ಕಾಮತ್ ಯಾತ್ರಿ ನಿವಾಸದಲ್ಲಿ ಘಟನೆ.

ಮುರ್ಡೇಶ್ವರ ಮತ್ತು ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಮೂವರ ಮೇಲೆ ಪ್ರಕರಣ.

ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು

ದಾರಿ ಸಿಗದೇ ಕಾಡಲ್ಲಿ ನಾಲ್ಕು ದಿನ ಕಳೆದ  ವೃದ್ದ ವೈದ್ಯ.  ಪತ್ತೆ ಹಚ್ಚಿದ ಪೊಲೀಸ್ ‌ಶ್ವಾನ.

ಅಂದರ್ ಬಾಹರ್ ಆಡಲು ಹೋಗಿ ಸಿಕ್ಕಿ ಬಿದ್ದ ಮೂವರು. ಏಳು ಮಂದಿ ಪರಾರಿ.