ಅಂಕೋಲಾ(ANKOLA) :  ಕೆಟ್ಟು ನಿಂತ ವಾಹನವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಚಾಲಕ ಪರಾರಿಯಾದ ಘಟನೆ ಅಂಕೋಲಾದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ (NH- 63 Baleguli) ಚೆಕ್ ಪೋಸ್ಟ್ ಬಳಿ ಈ ಘಟನೆ ಸಂಭವಿಸಿದೆ. ಘಟನೆ ಬಳಿಕ ಚಾಲಕ ಎಸ್ಕೇಪ್ ಆಗಿದ್ದಾನೆ. ಆದರೆ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದ ಅಂಕೋಲಾ ಪೊಲೀಸರಿಗೆ ಶಾಕ್ ಉಂಟಾಗಿದೆ.

ಅಪಘಾತವಾದ ಲಾರಿ ಪರಿಶೀಲಿಸಿದಾಗ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಲಾರಿಯಲ್ಲಿ 15 ಕ್ಕೂ ಹೆಚ್ಚಿನ ದನಕರುಗಳು (Cattle) ಪತ್ತೆಯಾಗಿವೆ.  ಜಾನುವಾರುಗಳನ್ನು ಅತೀ ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೆಎ 43-5817 ನಂಬರಿನ ಲಾರಿಯಲ್ಲಿ ತುಂಬಿಕೊಂಡು ಖಾಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಅಪಘಾತವಾಗುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ನಾಪತ್ತೆಯಾಗಿದ್ದು ಜಾನುವಾರುಗಳನ್ನ ಯಾವ ಕಡೆಯಿಂದ  ತುಂಬಿಕೊಂಡು ಬರುತ್ತಿದ್ದ ಎಂಬುದು ಗೊತ್ತಾಗಿಲ್ಲ. ಇದು ಯಾರ ವಾಹನ.  ಯಾರ್ಯಾರು ಈ ಅಕ್ರಮ ಸಾಗಾಟದಲ್ಲಿ ಬಾಗಿಯಾಗಿದ್ದಾರೆ.  ಲಾರಿಯ ಮಾಲೀಕನಿಗಾಗಿ ಅಂಕೋಲಾ ಪೊಲೀಸರು(ANKOLA Police) ಶೋಧ ನಡೆಸಿದ್ದಾರೆ.

ರಕ್ಷಣೆ ಮಾಡಿದ ಜಾನುವಾರುಗಳನ್ನ ಸದ್ಯ ಪೊಲೀಸ್‌ ವಸತಿಗೃಹದ ಆವರಣದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯ ಪಿಎಸೈ ಉದ್ದಪ್ಪ ದರೆಪ್ಪನವರ್ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ದೀಪಾವಳಿಗೆ ಎಂಜಾಯ್ ಮಾಡಲು ಬಂದವರ ರಕ್ಷಣೆ

ದೀಪಾವಳಿ ಉಡುಗೋರೆ ನೀಡಿದ ಸಚಿವ ಮಾಂಕಾಳ್ ವೈದ್ಯ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಉತ್ಸವ ಮೂರ್ತಿಯಾಗಿ ಬಂದ ಪ .ಪಂ ಅಧ್ಯಕ್ಷೆ