ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore): ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್(Cubbon park Police) ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಎಚ್ ಎಂ ವೆಂಕಟೇಶ್ ಎಂಬುವವರು ದೂರು ನೀಡಿದ್ದಾರೆ. ಜೂನ್ ನಾಲ್ಕರಂದು, ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ(IPL Trophy) ವಿಜೇತರಾದ ಸಂಬಂಧ ನಡೆದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ(Stampede) ಸಂಭವಿಸಿ 11 ಜನರು ಸಾವನ್ನಪ್ಪಿದ್ದರು.
ದೂರುದಾರ ವೆಂಕಟೇಶ್ ಅವರು ನೀಡಿದ ದೂರಿನಲ್ಲಿ ವಿರಾಟ್ ಕೊಹ್ಲಿ ಅವರ ಲಂಡನ್(London) ಪ್ರವಾಸವನ್ನು ಎತ್ತಿ ತೋರಿಸಿದ್ದಾರೆ. “ಸಾವಿನ ನಂತರ ಅವರು ಲಂಡನ್‌ಗೆ ತಕ್ಷಣ ತೆರಳಿರುವುದು ಈ ಅನುಮಾನ ಹೆಚ್ಚಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಅವರು ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಿದರು. ಆದರೆ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಎಚ್ಚರಿಕೆ ಅಥವಾ ಮುನ್ನೆಚ್ಚರಿಕೆಗಳನ್ನು ನೀಡಲು ವಿಫಲರಾದರು” ಎಂದು ತಿಳಿಸಿದ್ದಾರೆ.
ಜೂಜಾಟದಂತಹ ಮನರಂಜನೆಯಲ್ಲಿ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರಚೋದಿಸುವಲ್ಲಿ ಆರ್‌ಸಿಬಿ(RCB) ತಂಡದ ವಿರಾಟ್ ಕೊಹ್ಲಿ(Virat Kohli) ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಘಟನೆಗೆ ನೇರವಾಗಿ ಅವರು ಕಾರಣರಾಗಿದ್ದಾರೆ. ಆದ್ದರಿಂದ, ಈ ದುರಂತಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಹಿರಿಯ ಆರ್‌ಸಿಬಿ ತಂಡದ ಸದಸ್ಯರನ್ನು ಆರೋಪಿಗಳೆಂದು ಹೆಸರಿಸಬೇಕೆಂದು ಒತ್ತಾಯಿಸಲಾಗಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ವಿರಾಟ್ ಕೊಹ್ಲಿ ಅಭಿಮಾನಿಗಳಾಗಿದ್ದು, ಅವರು ಕರ್ನಾಟಕದ ವಿವಿಧ ಭಾಗದವರು ಮತ್ತು ಹೊರಗಿನವರಿದ್ದಾರೆ. ಎಲ್ಲರೂ ವಿರಾಟ್ ಕೊಹ್ಲಿಯನ್ನು ನೋಡಲು ಬಂದಿದ್ದರು. ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಕಾಲ್ತುಳಿತ ಪ್ರಕರಣ. ಪೊಲೀಸರ ದಾಳಿ. ಪ್ರಮುಖರು ನಾಪತ್ತೆ.