ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು (Mundgodu) : ಯಾವುದೇ ಎಣ್ಣೆ ಇಲ್ಲದೆ ಸುಮಾರು ನಾಲ್ಕುವರೆ ದಶಕಗಳ ಕಾಲ ನಿರಂತರವಾಗಿ ಉರಿದ ದೀಪವೊಂದು ಆರಿ ಹೋಗಿದೆ. ಇದು ಯುಗದ ಅಂತ್ಯವೇ, ಮುಂದೆ ಕೇಡುಗಾಲ ಹತ್ತಿರವಿದೆಯಾ ಎಂಬ ಚರ್ಚೆ ನಡೆಯುತ್ತಿದೆ.

ಉತ್ತರಕನ್ನಡ (Uttarakannada) ಜಿಲ್ಲೆಯ ಮುಂಡಗೋಡು (Mundgod) ತಾಲೂಕಿನ ಚಿಗಳ್ಳಿಯ (Chigalli) ಮೂರು ದೀಪಗಳು (Three Lamps) ಇಷ್ಟು ವರ್ಷಗಳ ಕಾಲ ಉರಿದಿರುವುದು ದೈವ ಭಕ್ತಿಯಿಂದಲೇ. ವಿಸ್ಮಯಕಾರಿ ದೀಪವನ್ನು ಪರೀಕ್ಷಿಸಲು ಬಂದವರು ಪತ್ತೆ ಹಚ್ಚಲಾಗದೆ ಸೋತಿದ್ದರು.

ಚಿಗಳ್ಳಿಯ ವಿಸ್ಮಯಕಾರಿ ಮೂರು ದೀಪಗಳು ಈಗ ಶಾಂತವಾದ ಮೇಲೆ ನಾಲ್ಕುವರೆ ದಶಕಗಳ ಕಥೆ ಮತ್ತೆ ಬಿಚ್ಚಿಕೊಳ್ಳುತ್ತಿದೆ. ಪರಮ ದೈವಭಕ್ತಿಯಾಗಿದ್ದ ಶಾರದಮ್ಮ ದೈವಜ್ಞ ಎಂಬ ಮಹಿಳೆಯೊಬ್ಬರು ಸೀಮೆ ಎಣ್ಣೆಯಿಂದ ಹಚ್ಚಿದ ಲಾಟೀನು 45 ವರ್ಷಗಳ ಕಾಲ ಯಾವುದೇ ತೈಲದ(Oil)  ಸಹಾಯವಿಲ್ಲದೆ ಲಕ್ಷಾಂತರ ಜನ ಅಸ್ತಿಕರನ್ನ  ಸೆಳೆದಿತ್ತು. ಒಂದೇ ರೀತಿಯಲ್ಲಿ ಬೆಳಗುತ್ತಿದ್ದ ಫೆಬ್ರವರಿ 5ರಂದು  ಆರಿಹೋಗಿರುವುದು ಬಹುಕಾಲದ ವಿಸ್ಮಯ(Wonder) ಮರೆಯಾಗಿದೆ.

ಶರದಮ್ಮ ಅವರು 1979 ಮತ್ತು 1980ರಲ್ಲಿ ಶಾರದಮ್ಮ ಹಚ್ಚಿದ್ದ ದೀಪಗಳು ಆರದೇ ಇದ್ದಾಗ ಅವರೇ ಮುಕವಿಸ್ಮಿತರಾಗಿದ್ದರು. ಈ ವಿಷಯ ನೆರೆಹೊರೆಯವರಿಗೆಲ್ಲ ಗೊತ್ತಾಗಿ ನಿತ್ಯ ನೂರಾರು ಜನರು ಬಂದು ವೀಕ್ಷಿಸಿ ಅಚ್ಚರಿ ಪಟ್ಟಿದ್ದರು. ದಿನ ಕಳೆದಂತೆ  ಚಿಗಳ್ಳಿ ದೀಪ(Chigalli Lamp) ಇರುವ ಜಾಗ ಕುತೂಹಲದ ಕೇಂದ್ರ ಬಿಂದುವಾಯಿತು. ಈ ವಿಸ್ಮಯದ ಬಗ್ಗೆ ತಿಳಿದುಕೊಳ್ಳಲು, ಬಯಲು ಮಾಡಲು ಮುಂದೆ ಬಂದ ಹಲವಾರು ಮಂದಿ ಸೋತು ಕೈ ಚೆಲ್ಲಿದ್ದರು. ಮನೆಯ ಛಾವಣಿ, ನೆಲ ಹಾಸು, ಎಣ್ಣೆ, ಸೀಮೆ ಎಣ್ಣೆ ಹೀಗೆ ಶೋಧ ನಡೆಸಿ ಪತ್ತೆ ಮಾಡಲು ವಿಫಲರಾಗಿದ್ದರು.

ಯಾರ ಪರೀಕ್ಷೆಗೂ, ಸವಾಲಿಗೂ ಕುಟುಂಬದವರು ತಲೆ ಕೆಡಿಸಿಕೊಳ್ಳಲಿಲ್ಲ. ದೇವತಾ ಸಂಕಲ್ಪದಂತೆ ದೀಪಗಳು ಉರಿಯುತ್ತವೆ ಎಂಬ ನಂಬಿಕೆ ಅಚಲವಾಗಿತ್ತು.

ಇದೀಗ ಮನೆಯ ಕುಟುಂಬದ ಸದಸ್ಯರೊಬ್ಬರು ಕೆಲ ದಿನಗಳ ಹಿಂದೆ ನಿಧಾನರಾಗಿದ್ದಾರೆ. ಅವರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳು ಮುಗಿದ ಮೇಲೆ  ದೀಪಗಳು ಆರಿ ಹೋಗಿದೆ. ಹೀಗಾಗಿ ದೀಪ(Lamp) ಆರಿರೋದು ಗ್ರಾಮದ ಜನರ ಚಿಂತೆ ಹೆಚ್ಚಿಸಿದೆ. ಮುಂದೇನಾಗುತ್ತೋ ಎಂದು ಜನತೆ ಭಯದಲ್ಲಿದ್ದಾರೆ.

ದೀಪನಾಥೇಶ್ವರ ದೇವಸ್ಥಾನದಲ್ಲಿನ(Deepanatheshwar Temple) ಮೂರು ದೀಪಗಳು ಶಾಂತವಾದ ಕಾರಣಕ್ಕೆ ಇಲ್ಲಿ ಬೇರೆ ದೇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಲು  ದೇವಸ್ಥಾನ ಆಡಳಿತ ಸಮಿತಿ ಯೋಚಿಸಿದೆ.
ಸಮಿತಿ ಸದಸ್ಯ ಶೇಷಾದ್ರಿ ಕೆ. ಪ್ರಕಟಣೆಯೊಂದನ್ನ ನೀಡಿ  ಈ ದೇವಸ್ಥಾನ ಪೂಜೆ ಮಾಡುತಿದ್ದ ವೆಂಕಟೇಶ ದೈವಜ್ಞ ಎಂಬವರು ಜ.23ರಂದು ಸಾವನ್ನಪ್ಪಿದರು. ಅವರ  ಸಂಸ್ಕಾರ, ವೈಕುಂಠ ಸಮಾರಾಧನೆ ಮುಗಿಸಿ ನಂತರ ದೇವಸ್ಥಾನದ ಬಾಗಿಲು ತೆಗೆದು ನೋಡಿದಾಗ ಮೂರು ದೀಪಗಳು ಶಾಂತವಾಗಿರುವುದು ಕಂಡು ಬಂದಿದೆ. ಇದರಿಂದ ಮುಂದೆ ಏನು ನಡೆಯುತ್ತದೆ ಎಂಬುದು ಕಾದೂ ನೋಡಬೇಕಿದೆ ಸದ್ಯ ದೇವಸ್ಥಾನದಲ್ಲಿ ಹೋಮ ಹವನಗಳನ್ನು ಮಾಡಿಸಿ ಪೂಜೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಸ್ಥಳವು ದೇವರ ಅನುಗ್ರಹವಿರುವ ಸಿದ್ದಿ ಸ್ಥಳವಾಗಿದ್ದು ಮುಂದಿನ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದುತಲೆ ನಾಗದೇವರು ಹಾಗೂ ದತ್ತಾತ್ರೇಯ, ಚೌಡೇಶ್ವರಿ, ಭೂತರಾಯ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಅಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ.

ಇದನ್ನು ಓದಿ : ಫೆ. 16 ರಂದು ಸಿದ್ದಾಪುರದಲ್ಲಿ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ

ಜಾತ್ರೆ ಸಂದರ್ಭದಲ್ಲಿ ಪೊಲೀಸ್ ದಾಳಿ. ಆರು ಎಲೆ ಮಾನವರ ಬಂಧನ.

ಇನ್ಮುಂದೆ ಶನಿವಾರ ಅರ್ಧ ದಿನ ಶಾಲೆ.

ಅಕ್ರಮ ಮದ್ಯ ದಂದೆಯ ಪೊಲೀಸಪ್ಪನಿಂದ ಮತ್ತೆ ಅದೇ ಚಾಳಿ. ಆಗ ಗೋಕರ್ಣ ಈಗ ಅಂಕೋಲಾ.