ಬೆಂಗಳೂರು(BANGLORE) : ರಾಷ್ಟ್ರದ ಪ್ರಮುಖ ಹಬ್ಬವೆಂದೇ ಹೇಳಲಾಗಿದ್ದ, ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾನುವಾರ ರಾಜ್ಯಾದ್ಯಂತ ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಚರಿಸಲಾಯಿತು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ವಿನ್ಯಾಸದ ಹಾಗೂ ವಿಭಿನ್ನ ಸಂದೇಶಗಳನ್ನು ಸಾರುವ ಉಡುಗೆ-ತೊಡುಗೆ, ವೇಷಭೂಷಣ ಹಾಗೂ ಕಲಾ ಪ್ರಾಕಾರಗಳ ಬಳಕೆ ಮಾಡಿ ಪ್ರಜಾಪ್ರಭುತ್ವದ(DEMOCRACY) ಮಹತ್ವ ಸಾರಿದರು.
ಜಿಲ್ಲಾಡಳಿತದ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳ ನೌಕರರು ಹಾಗೂ ಸಾವಿರಾರು ಸೇವಾ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಎಲ್ಲಾ ಶಾಲಾ, ಕಾಲೇಜುಗಳ ಮಕ್ಕಳು ಕೈ ಹಿಡಿದು ಮಾನವ ಸರಪಳಿ ರಚಿಸಿ ಗಮನ ಸೆಳೆದರು. ಹಾಗೆಯೇ ಐಟಿ, ಬಿಟಿ ಖಾಸಗಿ ಸಂಸ್ಥೆಗಳು ಮತ್ತು ವಾಣಿಜ್ಯ ಮತ್ತು ವ್ಯಾಪಾರಿ ಸಂಸ್ಥೆಗಳ ಸಾವಿರಾರು, ಕಲಾವಿದರು, ವೈದ್ಯರೂ, ವಕೀಲರೂ ಸೇರಿದಂತೆ ವಿವಿಧ ಕ್ಷೇತ್ರಗಳ ವೃತ್ತಿಪರರ ಹಾಗೂ ಸಮಾಜದ ಎಲ್ಲಾ ವರ್ಗದ ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಮಹತ್ವದ ಜಾಗೃತಿ ಮೂಡಿಸಿದರು.
ಸಮಾಜ ಕಲ್ಯಾಣ ಇಲಾಖೆ (SOCIAL WELFARE DEPARTMENT) ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ(RURAL DEVELOPMENT) ಮತ್ತು ಶಿಕ್ಷಣ ಸೇರಿದಂತೆ 8 ಇಲಾಖೆಗಳು ಈ ಕಾರ್ಯಕ್ರಮದ ಉಸ್ತುವಾರಿ ಹೊತ್ತುಕೊಂಡು ನಡೆಸಿದ್ದು, ಉಳಿದ ಎಲ್ಲಾ 25ಕ್ಕೂ ಹೆಚ್ಚು ಇಲಾಖೆಗಳು ವಿವಿಧ ರೀತಿಯಲ್ಲಿ ತಮ್ಮದೇ ಸಹಭಾಗಿತ್ವ ಮೆರೆದು ದಿನಾಚರಣೆಯನ್ನು ಯಶಸ್ವಿಗೊಳಿಸಿವೆ.
ಹಾಗೆಯೇ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದು, ಪರೋಕ್ಷವಾಗಿ ಕೋಟ್ಯಂತರ ಜನರು ಬೆಂಬಲ ಸೂಚಿಸಿದ್ದಾರೆ.
ಇದೇವೇಳೆ ಸಂಪುಟದ ಎಲ್ಲಾ ಸಚಿವರೂ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಹೆಚ್ಚು ಯಶಸ್ವಿಯಾಗಿ ನಡೆಸಿದ್ದಾರಲ್ಲದೆ, ಅಲ್ಲೇ ಸಂವಿಧಾನದ ಪೀಠಿಕೆಯನ್ನು ಓದಿ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಆ ಭಾಗದಲ್ಲಿ ಸಾವಿರಾರು ಗಿಡಗಳನ್ನು ನೆಡಿಸಿ ಪರಿಸರ ರಕ್ಷಣೆಯ ಸಂದೇಶವನ್ನೂ ಸಾರಿದ್ದಾರೆ.
ಹೀಗೆ ವಿಭಿನ್ನ ರೀತಿಯಲ್ಲಿ ಪ್ರಜಾಪ್ರಭುತ್ವ ದಿನ ಆಚರಿಸಿದ ಜಿಲ್ಲೆಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ವಿಭಾಗಗಳಲ್ಲೂ 3 ಜಿಲ್ಲೆಗಳಂತೆ 15 ಜಿಲ್ಲೆಗಳಿಗೆ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಕೊಡಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ದಾಖಲೆಗೆ ಸೇರ್ಪಡೆ :
ಪ್ರಥಮ ಬಾರಿಗೆ ರಾಜ್ಯದ ಉತ್ತರ ತುದಿ ಬೀದರ್ (BIDAR)ನಿಂದ ಚಾಮರಾಜನಗರ ಜಿಲ್ಲೆ ವರೆಗೂ ಸುಮಾರು 2500 ಕಿ.ಮೀ. ಉದ್ದದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮಂದಿ ಮಾನವ ಸರಪಳಿ ರಚಿಸಿರುವುದು ದೇಶವೇ ಹೆಮ್ಮೆ ಪಡುವಂತಾಗಿದೆ. ಕಾರಣ, ಇಂಥ ಯಶಸ್ವೀ ಪ್ರಯೋಗ ವಿಶ್ವದಲ್ಲೇ ಪ್ರಥಮ ಬಾರಿಗೆ ನಡೆದಿದ್ದು, ಇದಕ್ಕೆ ವಿಶ್ವ ದಾಖಲೆ ಆರಂಭಿಕ ಪುರಸ್ಕಾರ ಲಭಿಸಿದೆ. ಲಂಡನ್ ನಲ್ಲಿರುವ ವಿಶ್ವ ದಾಖಲೆ ಸಂಸ್ಥೆಯ ಕರ್ನಾಟಕ ಪ್ರತಿನಿಧಿ ಶೈಲಜಾ ಅವರು ಬೆಂಗಳೂರಿನಲ್ಲಿ ನಡೆದ ಬೃಹತ್ ಹಾಗೂ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಹೆಸರಿನಲ್ಲಿ ನೀಡಿ ಗೌರವಿಸಿದರು.
ಯಶಸ್ವಿನರೂವಾರಿಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ (SIDDARAMAIHA )ಅವರು.ದೂರದೃಷ್ಠಿಯೊಂದಿಗೆ ಈ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಿ ಎಂದು ಸಹಕಾರ ನೀಡಿದ್ದರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಇಡೀ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಬೆಂಬಲಗಳನ್ನು ನೀಡಿ ತಮ್ಮದೇ ಪರಿಕಲ್ಪನೆಯಂತಿರಬೇಕೆಂದು ಪ್ರತಿದಿನದ ಸಿದ್ಧತೆ ಪರಿಶೀಲಿಸುತ್ತಿದ್ದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ (MANIVANNAN) ಅವರು, ಕಳೆದ ಜೂನ್ ನಿಂದಲೇ ಈ ಕಾರ್ಯಕ್ರಮದ ಯೋಜನೆ ರೂಪಿಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಮಂತ್ರಿಗಳೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದಿದ್ದರು. ನಂತರ ನಿರಂತರ ಸಭೆಗಳನ್ನು ನಡೆಸಿ 25ಕ್ಕೂ ಹೆಚ್ಚು ಉಪ ಸಮಿತಿಗಳನ್ನು ರಚಿಸಿ ಅವುಗಳ ನಿತ್ಯ ಅನುಷ್ಠಾನ ಕಾರ್ಯಗಳ ಮೇಲೆ ನಿಗಾವಹಿಸುತ್ತಿದ್ದರು. ಮಣಿವಣ್ಣನ್ ಅವರು ಕಳೆದ 15 ದಿನಗಳಿಂದ ಸಮಿತಿಗಳು ವಿವಿಧ ಇಲಾಖೆಗಳ ನೂರಾರು ಅಧಿಕಾರಿಗಳ ಜೊತೆ ಹಗಲಿರುಳು ಸಭೆ, ಚರ್ಚೆ, ಸಮಾಲೋಚನೆ ನಡೆಸಿದರು. ದಿಢೀರ್ ಸ್ಥಳ ಪರಿಶೀಲನೆಗಳನ್ನು ನಡೆಸಿ ತಮ್ಮದೇ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮದ ವಿಶೇಷ ಜಾಲ ರೂಪಿಸಿದ್ದರು. ಆ ಮೂಲಕ ರಾಜ್ಯಾದ್ಯಂತ ಪ್ರಜಾಪ್ರಭುತ್ವದ ದಿನಾಚರಣೆ ಎಲ್ಲೆಡೆ ಯಶಸ್ವಿಯಾಗುವಂತೆ ಮಾಡಿದರು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳು ಹೇಳಿದ್ದಾರೆ.