ಕುಮಟಾ(KUMTA) : ಶ್ವಾನ ಹಿಡಿಯಲು ಬಂದ ಚಿರತೆ(LEPORD) ಬಾವಿಗೆ ಬಿದ್ದು ಪರಿತಪಿಸಿದ ಘಟನೆ ತಾಲೂಕಿನ ಚಂದಾವರದಲ್ಲಿ ನಡೆದಿದೆ.
ಗ್ರಾಮದ ಮಲ್ಲಾಪುರದ ರಾಜು ಬೋಯಿ ಎಂಬುವವರ ಮನೆಯ ಅಂಗಳದಲ್ಲಿ ಈ ಘಟನೆ ಸಂಭವಿಸಿದೆ. ಮನೆಯ ಮುಂದಿನ ಬಾವಿಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚಿರತೆಯೊಂದು ಬಿದ್ದಿತ್ತು. ನಿನ್ನೆ ಒಂದು ನಾಯಿ (DOG)ಮರಿಯನ್ನು ಎತ್ತಿಕೊಂಡು ಹೋಗಿರುವುದನ್ನ ಮನೆಯವರು ಗಮನಿಸಿದ್ದಾರೆ. ಇಂದು ಬೆಳಿಗ್ಗೆ ಸಹ ಮತ್ತೊಂದು ನಾಯಿ ಮರಿ ಎತ್ತಿಕೊಂಡು ಓಟ ಕಿತ್ತಿದೆ. ಈ ಸಂದರ್ಭದಲ್ಲಿ ಆಯಾ ತಪ್ಪಿ ನಾಯಿ ಸಮೇತ ಚಿರತೆ (PANTHER) ಬಾವಿಗೆ ಬಿದ್ದಿದೆ.
ಮನೆಯವರು ಗಮನಿಸಿ ಅರಣ್ಯ ಇಲಾಖೆಗೆ(FOREST DEPARTMENT) ಸುದ್ದಿ ತಿಳಿಸಿದ್ದಾರೆ. ಕುಮಟಾ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಡಾ. ಅಶೋಕ ನಾಯ್ಕ ರವರ ನೇತೃತ್ವದಲ್ಲಿ ಚಿರತೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ವನ್ಯ ಜೀವಿ ಪ್ರೇಮಿಗಳಾದ ಸಿ.ಆರ್.ನಾಯ್ಕ , ಮಹೇಶ ನಾಯ್ಕ, ನಾಗರಾಜ್ ಶೇಟ್ ಹಾಗೂ ಪವನ್ ನಾಯ್ಕ ಎಲ್ಲರೂ ಸೇರಿ ಚಿರತೆಯನ್ನು ಸುರಕ್ಷಿತವಾಗಿ ಬಾವಿಯಿಂದ ಯಶಸ್ವಿಯಾಗಿ ಮೇಲಕ್ಕೆತ್ತಿದ್ದಾರೆ. ಬಳಿಕ ಬೋನಿಗೆ ಹಾಕಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಪುನಃ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನು ಓದಿ : ಉತ್ತರಕನ್ನಡ ಜಿಲ್ಲೆಯಲ್ಲಿ ಬೃಹತ್ ಮಾನವ ಸರಪಳಿ