ಕಾರವಾರ(KARWAR) : ಭಾರತೀಯ ಜನತಾ ಪಕ್ಷ(BJP) ಕಾರವಾರ ನಗರ ಮಂಡಲ ಹಾಗೂ ಗ್ರಾಮೀಣ ಮಂಡಲ ವತಿಯಿಂದ 78ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಗೆ “ಹರ್ ಘರ್ ತಿರಂಗಾ” (HUR GHUR TIRANGA) ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ನಡೆಯಿತು.
ನಗರದ ಬಿಜೆಪಿ ಕಾರ್ಯಾಲಯದ ಸಮೀಪ ಮಂಡಲದ ಅಧ್ಯಕ್ಷ ನಾಗೇಶ್ ಕುರಡೇಕರ್ ಮತ್ತು ಸುಭಾಷ್ ಗುನಗಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ” ಜೈಕಾರದೊಂದಿಗೆ ನಗರದ ಪ್ರಮುಖ ಮಾರ್ಗದಲ್ಲಿ ರ್ಯಾಲಿ ನಡೆಸಿದರು. ಹಬ್ಬುವಾಡ ಮೂಲಕ ಸವಿತಾ ಹೋಟೇಲ್ ಸರ್ಕಲ್, ನಗರದ ಬಸ್ ನಿಲ್ದಾಣ, ಸುಭಾಷ್ ಚಂದ್ರ ಬೋಸ್ ಸರ್ಕಲ್, ಶಿವಾಜಿ ಸರ್ಕಲ್, ವೀರ್ ಬಹದ್ದೂರ್ ಹೆಂಜಾ ನಾಯ್ಕ ಸರ್ಕಲ್ ಮಾರ್ಗವಾಗಿ ನಗರದ ಮಾಲಾದೇವಿ ಗ್ರೌಂಡ್ ತಲುಪಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಭಾರಿ, ಮಂಡಲ ಮುಖಂಡರು, ಮಂಡಲ ಪದಾಧಿಕಾರಿಗಳು, ಮಂಡಲ ಪ್ರಧಾನ ಕಾರ್ಯದರ್ಶಿ, ನಗರ ಸಭೆ ಸದಸ್ಯರು, ಮಂಡಲ ಯುವ ಮೋರ್ಚಾ, ಮಂಡಲ ಮಹಿಳಾ ಮೋರ್ಚಾ,ವಿವಿಧ ಮೋರ್ಚಾದವರು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿಕೇಂದ್ರ ಪ್ರಭಾರಿಗಳು, ಬೂತ್ ಅಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದು ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಿದರು.

