ಕಾರವಾರ(KARWAR) : ಅಂಕೋಲಾ(ANKOLA) ತಾಲೂಕಿನ ಶಿರೂರು (Shiruru ದುರಂತದಲ್ಲಿ ಸಾವು ಕಂಡವರ ಕುಟುಂಬಗಳಿಗೆ ಕೇಂದ್ರ ಸರ್ಕಾರ (CENTRAL GOVERNMENT) ಹಣ ಬಿಡುಗಡೆಗೊಳಿಸಿದೆ.

ಮೃತ ಕುಟುಂಬಕ್ಕೆ ತಲಾ ಎರಡು ಲಕ್ಷ  ರೂ. ಹಾಗೂ ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಗಳು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

ಶಿರೂರು ದುರಂತದಲ್ಲಿ ನೊಂದವರಿಗೆ ಪರಿಹಾರ ನೀಡುವಂತೆ ಸಂಸದ  ವಿಶ್ವೇಶ್ವರ ಹೆಗಡೆ ಕಾಗೇರಿ(KAGERI) ಅವರು ಪ್ರಧಾನಿ ನರೇಂದ್ರ ಮೋದಿ (PRIME MINISTER NARENDRA MODI) ಮೋದಿಗೆ ಪತ್ರ ಬರೆದಿದ್ದರು. ಶಿರೂರು(SHIRURU) ಹಾಗೂ ಉಳುವರೆ ಗ್ರಾಮಕ್ಕೆ (ULUVARE) ಭೇಟಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಭಾಗದ ಸಂತ್ರಸ್ತರಿಗೆ ವಿಶೇಷ ಅನುದಾನ ನೀಡಬೇಕು ಎಂದಿದ್ದರು.

ಈ ಹಿನ್ನಲೆಯಲ್ಲಿ  ಪ್ರಧಾನಿ ಅವರು ಅಧಿಕಾರಿಗಳಿಂದ ವರದಿ ತರಿಸಿಕೊಂದಿದ್ದ ಪ್ರಧಾನಿ ಮೋದಿ ಅವರು ಕಾಗೇರಿ ಅವರ  ಪತ್ರಕ್ಕೆ ಪ್ರತಿಕ್ರಿಯಿಸಿದ್ದರು. ಕೇಂದ್ರ ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿದೆ. ಸಂತ್ರಸ್ತ ಕುಟುಂಬದ ಪರವಾಗಿ ಪ್ರಾರ್ಥಿಸುತ್ತೇನೆ ಎಂದಿದ್ದರು.ಇದೀಗ  ಪ್ರಧಾನಿ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆಯಾಗಿದೆ.

ಇದನ್ನು ಓದಿ : ಬೇಡಿದವರಿಗೊಲಿಯುವ ಬಂಟದೇವ

ಭಟ್ಕಳ ಪಿಎಸ್ಐ ಅಮಾನತ್