ಅಂಕೋಲಾ(ANKOLA) : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63(NH63) ಕಂಚಿನಬಾಗಿಲು ಬಳಿ ಆ್ಯಸಿಡ್(ACID) ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಆಂಧ್ರಪ್ರದೇಶದಿಂದ ಗೋವಾ(ANDRAPRADESHA TO GOA) ಕಡೆ ಟ್ಯಾಂಕರ್ (TANKER)ತೆರಳುತಿತ್ತು. ಕಂಚಿನಬಾಗಿಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ.
ಟ್ಯಾಂಕರ್ ನಲ್ಲಿ ಸುಮಾರು 34 ಟನ್ ಸಲ್ಪುರಿಕ್ ಆ್ಯಸಿಡ್ (SULPHURIC ACID) ತುಂಬಿ ಒಯ್ಯಲಾಗುತಿತ್ತು. ಘಟನೆಯಿಂದ ಚರಂಡಿಯಲ್ಲಿ ಸಂಪೂರ್ಣವಾಗಿ ಆ್ಯಸಿಡ್ ಸೋರಿಕೆಯಾಗಿ ಖಾಲಿಯಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿ ನಿಗಾ ವಹಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಶ್ರೀಗಳ ಸೀಮೋಲ್ಲಂಘನ