ಭಟ್ಕಳ(BHATKAL) : ವೆಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮತ್ತು ಲಾಡ್ಜ್ ಮೇಲೆ ದಾಳಿ ನಡೆಸಿದ ಘಟನೆ ಮುರ್ಡೇಶ್ವರ ರಾ. ಹೆದ್ದಾರಿ 66(MURDESHWAR NH 66) ಬಳಿ ನಡೆದಿದೆ.
ಹೆದ್ದಾರಿ ಪಕ್ಕದ ಹೈ ಲ್ಯಾಂಡ್ ಹೋಟೆಲ್‌ನಲ್ಲಿ ನಡೆದಿದೆ. ಕಾನೂನು ಬಾಹಿರ ಕೃತ್ಯ ನಡೆಸಲಾಗುತ್ತಿದೆ ಎಂಬ ಮೇರೆಗೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಹೋಟೆಲ್ ನಲ್ಲಿದ್ದ ಯುವತಿಯರು ತಮ್ಮ ಬ್ಯಾಗ್, ಬಟ್ಟೆ ಇತರ ವಸ್ತುಗಳನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಹೋಟೆಲ್ ಸಿಬ್ಬಂದಿ ಸೇರಿ ನಾಲ್ವರು ಪುರುಷರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಸೂಚನೆ ಮರೆಗೆ ಕಾರವಾರ ಸಿಇಎನ್ ವಿಭಾಗದ ಡಿವೈಎಸ್ಪಿ ಅಶ್ವಿನಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಯಾವುದೇ ಅನುಮತಿ ಇಲ್ಲದೆ ಹೋಟೆಲ್ ಪಕ್ಕದಲ್ಲಿ ಕ್ಲಬ್ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ. ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Idannu ಓದಿ : ಸಿಎಂ ಆಸೆ ಬಿಚ್ಚಿಟ್ಟ ದೇಶಪಾಂಡೆ
ಕಾಡುಕುರಿ ಬೇಟೆಯಾಡಿದ ವ್ಯಕ್ತಿ ಮೇಲೆ ದಾಳಿ