ಕಾರವಾರ(KARWAR ) : ರಾಜ್ಯದ ಶಕ್ತಿ ಸ್ಥಳಗಳಲ್ಲೊಂದಾದ ಕಾರವಾರ ತಾಲೂಕಿನ ಅಮದಳ್ಳಿಯ ಶ್ರೀ ವೀರ ಗಣಪತಿ (AMADALLI VEER GANAPATI) ದೇವರಿಗೆ ನೂತನವಾದ ಬೆಳ್ಳಿಯ ಮುಖವಾಡವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮರ್ಪಿಸಲಾಯಿತು.
ಎರಡು ದಿನಗಳ ಕಾಲ ಶ್ರೀ ಸಂಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಪಂಚಗವ್ಯ (ಬ್ರಹ್ಮಕೂರ್ಚ ಹೋಮ) ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಹೋಮ, ವಾಸಪಾರಾಯಣ, ವಾಸ್ತು ಪಾರಾಯಣ, ಕಲಶ ಸ್ಥಾಪನೆ, 108 ಕಲಶ ಸ್ಥಾಪನೆ, ಆದಿವಾಸಪೂಜೆ ಮೊದಲ ದಿನ ನಡೆಯಿತು.
ಭಾನುವಾರದಂದು ಕಲಶಪೂಜೆ, ಗ್ರಹಶಾಂತಿ, ಕಲಾವೃದ್ಧಿ ಹೋಮ, ಗಣಹೋಮ, 108 ಕಲಶ ಅಭಿಷೇಕ mattu ಕನ್ಯಾಲಗ್ನದಲ್ಲಿ ಶ್ರೀ ವೀರ ಗಣಪತಿ ದೇವರಿಗೆ ಕವಚ ಸಮರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ರಾಜೋಪಚಾರ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ರಾತ್ರಿ ಶ್ರೀ ಯಕ್ಷಗಾನ ಕಲಾಮೇಳ ಶಿರಸಿ ಇವರಿಂದ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.
idannu ಓದಿ : ಸಂಕಷ್ಟದಲ್ಲಿ ನೆನಪಾಗುವ ಅಮದಳ್ಳಿಯ ಶ್ರೀ ವೀರ ಗಣಪತಿ