ಮೈಸೂರು(MYSORE):  ಕಾಂಗ್ರೆಸ್ ನ ಹಿರಿಯ ನಾಯಕ ಆ‌ರ್.ವಿ ದೇಶಪಾಂಡೆ (R V DESHAPANDE) ಸಿಎಂ ಆಗುವ ಆಸೆ ಬಿಚ್ಚಿಟ್ಟಿದ್ದಾರೆ. 

ಮೈಸೂರಿನಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಸ್ತುತ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಇರುವ ಸಿದ್ದರಾಮಯ್ಯ (SIDDARAMAIHA) ಅವರು ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ ಎಂದು ಹೇಳಿದ್ದಾರೆ. ಮುಡಾ(MUDA) ಹಗರಣದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ.  ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮತ್ತೊಮ್ಮೆ
ಅವರು ಉಚ್ಚರಿಸಿದ್ದಾರೆ.

ಹಿಂದೆ ಫೋನ್ ಟ್ಯಾಪಿಂಗ್ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗಡೆ(RAMAKRISHNA HEGADE) ರಾಜೀನಾಮೆ(RESIGNED) ನೀಡಿದ್ದರು. ಈಗ ದಿನ ಫೋನ್ ಟ್ಯಾಪ್ ನಡೀತಾ ಇದೆ, ಆದರೆ ಮೌಲ್ಯಾಧಾರಿತ ರಾಜಕಾರಣ ಇಲ್ಲ ಎಂದು  ಬೇಸರಿಸಿದರು.  ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕು ಅಷ್ಟೆ. ಆದರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.  ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇರುತ್ತೆ. ಜೀವನದಲ್ಲಿ ಮಹತ್ವಕಾಂಕ್ಷೆ ಇರಬೇಕು. ನಾನು ಸಿದ್ದರಾಮಯ್ಯಗಿಂತ  ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್(HICOMMOND) ಅವಕಾಶ ಕೊಟ್ಟರು, ಸಿದ್ದರಾಮಯ್ಯ ಅನುಮತಿ ಕೊಡಬೇಕೆಂದರು.

ನಾನು ಸಿದ್ದರಾಮಯ್ಯಗೆ ಒಳ್ಳೆಯ ಸ್ನೇಹಿತ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರುತ್ತಾರೆ. ಸದ್ಯ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲದೆ ಯಾವ ಚರ್ಚೆ ನಡೆಯಲು ಸಾಧ್ಯ ಇಲ್ಲ ಎಂದು ಆ‌ರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರದ ಗ್ಯಾರಂಟಿ(GYARANTEE) ಯೋಜನೆಯ ಬಗ್ಗೆ  ಪ್ರತಿಕ್ರಿಯಿಸಿದ ದೇಶಪಾಂಡೆ, ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬಂದಿರುವುದು ನಿಜ. ಗ್ಯಾರಂಟಿ ಯೋಜನೆಗೆ 50 ರಿಂದ 60ಸಾವಿರ ಕೋಟಿ ರೂ. ಬೇಕಾಗಿದೆ. ಆದರೆ ತೊಂದರೆಯಾಗಿರುವುದನ್ನು ಸರಿದೂಗಿಸುತ್ತಿದ್ದಾರೆ  ಎಂದರು.

ಇದನ್ನು ಓದಿ : ವಾಯು ಭಾರ ಕುಸಿತ ಎಪೆಕ್ಟ್ ಬಾರೀ ಮಳೆ ಸಾಧ್ಯತೆ.

ಕಾಡುಕುರಿ ಬೇಟೆಯಾಡಿದ ವ್ಯಕ್ತಿ ಮೇಲೆ ದಾಳಿ

ಪಂಚಾಯತ್ ಅನುದಾನದಲ್ಲಿ ತಾರತಮ್ಯ ಸದಸ್ಯರಿಂದ ಪ್ರತಿಭಟನೆ