ಭಟ್ಕಳ (Bhatkal):  2023-24 ರ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ  ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘಕ್ಕೆ (Alvekodi Fisheries Co Operative Society) ಉತ್ತಮ ಸಹಕಾರಿ ಸಂಘ ಎಂದು ಸತತ ಎರಡನೇ ಬಾರಿ ಆಯ್ಕೆಮಾಡಿ ಪ್ರಶಸ್ತಿ ನೀಡಲಾಗಿದೆ.

ಗುರುವಾರ ಮುರ್ಡೇಶ್ವರದ ತೆರ್ನಮಕ್ಕಿ ಆರ್.ಎನ್.ಎಸ್ ಗಾಲ್ಫ್ ರೆಸಾರ್ಟ್ ನಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ  ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ(DCM D K Shivakumar) ಹಾಗೂ  ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ (Mankal Vaidya) ಅವರು ಪ್ರಶಸ್ತಿ ನೀಡಿದರು.

ಸಂಘದ ಅಧ್ಯಕ್ಷ  ವಿಠಲ ಎಸ್. ದೈಮನೆ ಹಾಗೂ ಮುಖ್ಯ ಕಾರ್ಯನಿರ್ವಾಹಕ  ನಾರಾಯಣ ಎನ್. ಮೊಗೇರ ಅವರು ಪ್ರಶಸ್ತಿ ಸ್ವೀಕರಿಸಿದರು. ಕಳೆದ ವರ್ಷ ಸಹ ಅಳ್ವೆಕೋಡಿ ಮೀನುಗಾರರ ಸಹಕಾರಿ ಸಂಘ ಪ್ರಶಸ್ತಿ ಪಡೆದಿತ್ತು.

ಈ ಸಂದರ್ಭದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ಯಶಪಾಲ್ ಸುವರ್ಣ, ಎಂಎಲ್ಸಿ ಗಣಪತಿ ಉಳ್ವೆಕರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣ್ ರಾವ್ ಇನ್ನಿತರರು ಉಪಸ್ಥಿತರಿದ್ದರು.

ಇದನ್ನು ಓದಿ :
ನೇತ್ರಾಣಿಗೆ ಜಾಲಿ ಟ್ರಿಪ್ ಮಾಡಿದ ಡಿ ಕೆ ಶಿವಕುಮಾರ್

ಮದುವೆ ಸಮಾರಂಭದಲ್ಲಿ ಹೃದಯಘಾತ