ಶಿರಸಿ(SIRSI): ನಗರದ ಹೊಸಪೇಟೆ ರಸ್ತೆಯಲ್ಲಿ ಬ್ರೌನವುಡ್(Brownwood) ಸಂಸ್ಥೆಯ ಪಿಠೋಪಕರಣಗಳ ನೂತನ ಮಳಿಗೆಯನ್ನ ಬುಧವಾರ ಶಾಸಕ ಭೀಮಣ್ಣ ನಾಯ್ಕ(MLA Bheemanna Naik) ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಉಡುಪಿಯಲ್ಲಿ ಒಂದು ಚಿಕ್ಕದಾಗಿ ಚಿಗುರೊಡೆದು ಇವತ್ತು ಭಟ್ಕಳ(Bhatkal), ಕುಮಟಾ(Kumta), ದಾಂಡೇಲಿ(Dandeli), ಈಗ ಶಿರಸಿ(Sirsi) ನಗರದ ಪ್ರಮುಖ ರಸ್ತೆಯಲ್ಲಿ ಇಷ್ಟೊಂದು ವಿಶಾಲವಾದ ಜಾಗದಲ್ಲಿ ಪ್ರಾರಂಭಿಸಿರುವುದು ಸಂತಸ ತಂದಿದೆ. ಚೈನಾ ದೇಶದ ಮಾರುಕಟ್ಟೆಯಲ್ಲಿ ದೊರೆಯುವ ಪಿಠೋಪಕರಣಗಳು ಈ ಬ್ರೌನವುಡ್ ಸಂಸ್ಥೆಯಲ್ಲಿ ಸಿಗುವಂತ ಪಿಠೋಪಕರಣಗಳು ಒಂದೆ ತರ ಇದ್ದಾವೆ ಅದಕ್ಕಾಗಿ ಸಾರ್ವಜನಿಕರು ಇದರ ಲಾಭವನ್ನ ಪಡೆದು ಕೊಳ್ಳಬೇಕೆಂದು ಹೇಳಿದರು.
ಅದಲ್ಲದೇ ಈ ಸಂಸ್ಥೆಯವರು ಈ ನೂತನ ಮಳಿಗೆಯನ್ನು ಪ್ರಾರಂಬಿಸುವ ಮೂಲಕ ನೂರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಿ ಕೊಟ್ಟಂತಾಗಿದೆ ಎಂದರು. ನಿಮ್ಮ ಜತೆಗೆ ನಗರಸಭೆ ಮತ್ತು ನಾನು ಇರುತ್ತೇನೆಂದು ಸಂಸ್ಥೆಯ ಮಾಲಿಕರಿಗೆ ಭರವಸೆ ನೀಡಿದರು.
ಈ ಬ್ರೌನವುಡ್ ಸಂಸ್ಥೆಯವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪಿಠೋಪಕರಣಗಳನ್ನು ನೀಡಬೇಕು. ಹಾಗೆಯೇ ಒಳ್ಳೆಯ ಸೇವೆಯನ್ನು ನೀಡಬೇಕೆಂದು ಸಂಸ್ಥೆಯ ಮಾಲಿಕರಿಗೆ ಕಿವಿ ಮಾತು ಹೇಳಿದರು.
ಟಿ.ಎಮ್.ಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟಿಸರ ಮಾತನಾಡಿ, ಬ್ರೌನವುಡ್ ಸಂಸ್ಥೆಯವರು ಶಿರಸಿಯಲ್ಲಿ ಈ ಒಂದು ಪಿಠೋಪಕರಣಗಳ ನೂತನ ಮಳಿಗೆಯನ್ನು ತೆರೆದಿರುವುದು ಸಂತೋಷದಾಯಕವಾಗಿದೆ. ಅಷ್ಟೇ ಜವಾಬ್ದಾರಿ ಸಂಸ್ಥೆಯವರ ಮೇಲೆ ಇದೆ. ಅದಕ್ಕಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಬೇಕೆಂದರು. ಸಂಸ್ಥೆಯ ಪರವಾಗಿ ಎನ್.ಎಮ್ ಭಟ್ಟ ಶಾಸಕರಿಗೆ ಗುಲಾಬಿ ಹೂವು ನೀಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿ.ಎಮ್ ಹೆಗಡೆ ಮುಳಕಂಡ, ಎಮ್ .ಇ.ಎಸ್ ಅದ್ಯಕ್ಷರು ಶಿರಸಿ , ಬಿಜೆಪಿ ಜಿಲ್ಲಾದ್ಯಕ್ಷ ಎನ್ ಎಸ್ ಹೆಗಡೆ, ನಗರ ಸಭೆ ಅದ್ಯಕ್ಷೆ ಶರ್ಮಿಳಾ ಮಾದನಗೇರಿ , ನಗರ ಸಭೆ ಉಪಾದ್ಯಕ್ಷ ರಮಾಕಾಂತ ಭಟ್ಟ, ವಿ.ಕೆ.ನಾಯ್ಕ ಅಧ್ಯಕ್ಷರು ಸಣ್ಣ ಕೈಗಾರಿಕೆಗಳ ಸಂಘ ಉ.ಕ. , ಗೋಪಾಲಕೃಷ್ಣ ಹೆಗಡೆ ಅದ್ಯಕ್ಷರು ಹಾಪ್ ಕಾಮ್ಸ್ ಉ.ಕ., ಗಣಪತಿ ಆರ್. ಎಮ್ ನಿವೃತ್ತ ಸೈನಿಕರು ಕುಮಟಾ, ಕೆ ಅಬ್ದುಲ್ ಕರೀಂ ಎಚ್.ಕೆ.ಎಚ್, ವಿಠ್ಠಲ್ ನಾಯ್ಕ , ಸಂತೋಷಕುಮಾರ , ರಾಜೇಶ, ಸವಿತಾ ಎಮ್ ಭಟ್ಟ ಮತ್ತು ಇತರರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನು ಓದಿ : ಡಿಸೆಂಬರ್ 2 ರಿಂದ ಕುಮಟಾ -ಶಿರಸಿ ರಸ್ತೆ ಸಂಚಾರ ಬದಲು