ಕಾರವಾರ (KARWAR) : ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ್ ಚಿತ್ತಾಕುಲದ (CHITTAKUL )ಮಾಜಿ ಅಧ್ಯಕ್ಷ ರಾಜು ತಾಂಡೇಲ್(Raju Tandel) ಅವರ ನಿಧನದಿಂದ ತೆರವಾದ ಕ್ಷೇತ್ರ ಸೀಬರ್ಡ್ ಪುನರ್ವಸತಿ ಕೇಂದ್ರದ (Seabird Rehabitation Center)ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಸುಭಾಷ್ ದುರ್ಗೆಕರ್(Subhas Durgekar) ಗೆಲುವು ಸಾಧಿಸಿದ್ದಾರೆ.
ರಾಜು ತಾಂಡೇಲ್ ಅವರು ಈ ವಾರ್ಡಿನಿಂದ ಸತತವಾಗಿ ಹಲವು ಬಾರೀ ಆಯ್ಕೆಯಾಗುತ್ತಾ ಬಂದಿದ್ದರು. ಇದೀಗ ಅವರ ಭಾವ ಸುಭಾಷ್ ದುರ್ಗೆಕರ್ ಉಪ ಚುನಾವಣೆಯಲ್ಲಿ(By-election) ಏರಿಯಾ ನಾಗರಿಕರ ಒತ್ತಾಯಕ್ಕೆ ಸ್ಪರ್ಧೆ ಮಾಡಿದ್ದರು. ಒಟ್ಟು ಮೂವರು ಎದುರಾಳಿಗಳಿದ್ದರು. ಆದರೆ ವಾರ್ಡಿನ ಮತದಾರರು ರಾಜು ತಾಂಡೇಲ್ ಅವರು ಮಾಡಿದ ಜನಪರ ಕಾರ್ಯ, ಸಮಾಜ ಸೇವೆಯನ್ನ ನೆನಪಿನಲ್ಲಿಟ್ಟುಕೊಂಡು ಸುಭಾಷ್ ಅವರನ್ನ ಆಯ್ಕೆ ಮಾಡಿದ್ದಾರೆ.
ಉಪಚುನಾವಣೆಯಲ್ಲಿ ಸುಭಾಷ್ ದುರ್ಗೆಕರ್ ಒಟ್ಟು 350 ಮತ ಪಡೆದರೇ, ಭರತ್ ಖಾರ್ವಿ 292 ಮತ ಪಡೆದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸುಭಾಷ್, ವಾರ್ಡಿನ ಜನರು ಭಾವ ರಾಜು ತಾಂಡೇಲ್ ಅವರು ಮಾಡಿದ ಕೆಲಸದಿಂದ ನನ್ನನ್ನ ಆಯ್ಕೆ ಮಾಡಿದ್ದಾರೆ. ಅವರು ಮಾಡಿದಷ್ಟು ಕೆಲಸ ನನ್ನಿಂದ ಮಾಡಲು ಸಾಧ್ಯವಾಗದಿದ್ದರೂ, ಅವರು ಹೆಸರು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. ಸೀಬರ್ಡ್ ಪುನರ್ವಸತಿ ಕೇಂದ್ರದ ಮತದಾರರಿಗೆ ಕೃತಘ್ನತೆ ಸಲ್ಲಿಸಿದ್ದಾರೆ.
ಇದನ್ನು ಓದಿ : 27ರಂದು ಮೂರು ತಾಲೂಕುಗಳಲ್ಲಿ ವಿದ್ಯುತ್ ಇರಲ್ಲ.