ಬೆಂಗಳೂರು(Bangalore) : ದೇಶದ ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ (Karnataka Ex Chief Minister) ಎಸ್‌ ಎಂ ಕೃಷ್ಣ (S M KRISHNA) ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಸದಾಶಿವ ನಗರದಲ್ಲಿರುವ (Sadashivanagara) ತಮ್ಮ ನಿವಾಸದಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ವಯೋ ಸಹಜ ಆರೋಗ್ಯ ಸಮಸ್ಯೆಯಿಂದ  ಬಳಲುತ್ತಿದ್ದ ಎಸ್‌ಎಂ ಕೃಷ್ಣ (S M KRISHNA) ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಎಸ್ಎಂ ಕೃಷ್ಣ (S M KRISHNA) ಅವರ ಪಾರ್ಥಿವ ಶರೀರವನ್ನು ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರೀಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಮಂಡ್ಯ(Mandya) ಜಿಲ್ಲೆಯ ಮದ್ದೂರಿನ(Madduru) ಸೋಮಹಳ್ಳಿಯಲ್ಲಿ(Somanahalli) 1932ರ ಮೇ 1 ರಂದು ಜನಿಸಿದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ತಮ್ಮ ಹುಟ್ಟೂರಿನಲ್ಲಿಯೇ ಶಿಕ್ಷಣವನ್ನು ಪೂರೈಸಿ ನಂತರ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನ(Mysore Maharaja College) ಪದವಿ ಶಿಕ್ಷಣವನ್ನು ಪೂರೈಸಿದ್ದರು. ನಂತರ ಮೈಸೂರು ವಿವಿಯ ಕಾನೂನು ಪದವಿಯನ್ನು ಪಡೆದುಕೊಂಡರು. ಅಷ್ಟೇ ಅಲ್ಲದೇ ಅಮೇರಿಕಾದ ಟೆಕ್ಸಾಸ್‌ನ(America Texas) ಡಲ್ಲಾಸ್‌ನಲ್ಲಿ ಇರುವ ಸದರ್ನ್‌ ಮೆಥೋಡಿಸ್ಟ್‌ ವಿಶ್ವವಿದ್ಯಾಲಯದಲ್ಲಿ ಹಾಗೂ ವಾಷಿಂಗ್ಟನ್‌ ಡಿಸಿಯ ಜಾರ್ಜ್‌ ವಾಷಿಂಗ್ಟನ್‌ ವಿವಿಯಲ್ಲಿ(Washington University) ಪದವಿಯನ್ನು ಪಡೆದಿದ್ದಾರೆ.

ಅವರು ಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ(Madduru Assembly) ಪಕ್ಷೇತರ ಅಭ್ಯರ್ಥಿಯಲ್ಲಿ ಕಣಕ್ಕೆ ಇಳಿಯುವ ಮೂಲಕ ಗೆಲುವು ಸಾಧಿಸಿ  ರಾಜ್ಯ ರಾಜಕೀಯ ಪ್ರವೇಶ ಮಾಡಿದ್ದರು.  ಆದರೆ ಪ್ರಜಾ ಸೋಷಿಯಲಿಸ್ಟ್‌ ಪಕ್ಷ ಸೇರ್ಪಡೆ ಆಗಿದ್ದ ಕೃಷ್ಣ ಅವರು ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು. ಆದರೆ 1968ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಮಾಡಿದ್ದಾರೆ. ಸತತ ಮೂರು ಬಾರಿ ಮಂಡ್ಯ ಸಂಸದರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

1999ರಿಂದ 2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.  ಕೆಪಿಸಿಸಿ ಅಧ್ಯಕ್ಷರಾಗಿದ್ದ (KPCC President) ಅವಧಿಯಲ್ಲಿ ಕೈಗೊಂಡ ಪಾಂಚಜನ್ಯ ಯಾತ್ರೆ(Panchajanya Yatre) ಕರ್ನಾಟಕದ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಚೈತನ್ಯವನ್ನು ತುಂಬಿತ್ತು. ಸಕ್ರೀಯ ರಾಜಕಾರಣದಿಂದ ದೂರವಾದ ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು ಪ್ರಧಾನಿ ಮನಮೋಹನ್‌ ಸಿಂಗ್‌ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2017 ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದ ಎಸ್ಎಂ ಕೃಷ್ಣ (S M KRISHNA) ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆ ಆಗಿದ್ದರು. ಕಳೆದ ವರ್ಷವಷ್ಟೇ  ಅವರು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.

ಇದನ್ನು ಓದಿ : ಬೈಕ್ ಗೆ ಗ್ಯಾಸ್ ಸಾಗಿಸುವ ವಾಹನ ಡಿಕ್ಕಿ. ಸವಾರ ಮೃತ್ಯು.

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಹೊಂದಾಣಿಕೆ : ಪ್ರಣಾವಾನಂದ ಸ್ವಾಮಿ ಗಂಭೀರ ಆರೋಪ

ಜೋಕಾಲಿ ಆಡುತ್ತಿದ್ದಾಗ ಹಗ್ಗ ಸುತ್ತಿ ಬಾಲಕಿ ಸಾವು.

ಬಸ್ ಸ್ಟೇರಿಂಗ್ ಗೆ ಚಾಲಕರನ್ನ ಕಟ್ಟಿ ರೈತರ ಆಕ್ರೋಶ