ಬೆಂಗಳೂರು(Bangalore) : ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ(Ex Chief Minister ) ಹಾಗೂ ಕೇಂದ್ರ ಸಚಿವರಾಗಿದ್ದ(Central Minister) .ಎಸ್.ಎಂ.ಕೃಷ್ಣ (S M Krishna) ನಿಧನ ಗೌರವಾರ್ಥವಾಗಿ ನಾಳೆ ಡಿಸೆಂಬರ್ 11 ಬುಧವಾರದಂದು ರಜೆ ಘೋಷಿಲಾಗಿದೆ (Holiday Declare)

ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ(Government Office) ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) (School College)ಸಾರ್ವಜನಿಕ ರಜೆಯನ್ನು ಘೋಷಣೆ(Public Holiday Declare) ಮಾಡಲಾಗಿದೆ.

ಇಂದು ಬೆಳಗಿನ ಜಾವ 02:30ರ ವೇಳೆ  ಎಸ್ ಎಂ ಕೃಷ್ಣ ನಿಧನರಾದ ವಿಷಯ ತಿಳಿದ ಕರ್ನಾಟಕ ರಾಜ್ಯ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದೆ. ದಿವಂಗತರ ಅಂತ್ಯಕ್ರಿಯೆಯನ್ನು ನಾಳೆ ಬುಧವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.

ದಿವಂಗತರ ಗೌರವಾರ್ಥವಾಗಿ ನಾಳೆ   ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಅಲ್ಲದೇ ಇಂದಿನಿಂದ ದಿನಾಂಕ12 ರವರೆಗೆ (ಉಭಯ ದಿನಗಳು ಸೇರಿ) ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ನೀಡಿದ್ದಾರೆ.

ಇದನ್ನು ಓದಿ : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇನ್ನೂ ನೆನಪು ಮಾತ್ರ.

ಬೈಕ್ ಗೆ ಗ್ಯಾಸ್ ಸಾಗಿಸುವ ವಾಹನ ಡಿಕ್ಕಿ. ಸವಾರ ಮೃತ್ಯು.

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಹೊಂದಾಣಿಕೆ : ಪ್ರಣಾವಾನಂದ ಸ್ವಾಮಿ ಗಂಭೀರ ಆರೋಪ

ಜೋಕಾಲಿ ಆಡುತ್ತಿದ್ದಾಗ ಹಗ್ಗ ಸುತ್ತಿ ಬಾಲಕಿ ಸಾವು.

ಬಸ್ ಸ್ಟೇರಿಂಗ್ ಗೆ ಚಾಲಕರನ್ನ ಕಟ್ಟಿ ರೈತರ ಆಕ್ರೋಶ