ಕಾರವಾರ(Karwar) :  ಸ್ಟಾರ್ ಚಾಯ್ಸ್ (Star Choice) ಕಲಾ ಕೇಂದ್ರ ಹಾಗೂ ಪ್ರವಾಸೋದ್ಯಮ ಇಲಾಖೆಯ(Tourism Department) ಸಹಯೋಗದಲ್ಲಿ ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ(Rabindranath Tagore Beach) “ಕಡಲ ಉತ್ಸವ”(Kadalu Utsav) ಹಾಗೂ “ಬೀಚ್ ಕಾರ್ನಿವಲ್”(Beach Cornival) ಅದ್ಭುತವಾದ ಕಾರ್ಯಕ್ರಮ ನಡೆಯುತ್ತಿದೆ.

ಇಂದಿನಿಂದ ಡಿಸೆಂಬರ್ 22ರ ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿದೆ. ಸ್ಥಳೀಯ ಕಲಾವಿದರಿಂದ ಯಕ್ಷಗಾನ, ಭರತನಾಟ್ಯ, ನೃತ್ಯ ರೂಪಕ, ಡೊಳ್ಳು ಕುಣಿತ, ಜಾನಪದ ಉತ್ಸವ ನಡೆಯಲಿದೆ.

ಡಿಸೆಂಬರ್ 21 ಶನಿವಾರದಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಕಾರವಾರದಲ್ಲಿ ಪ್ರಥಮ ಬಾರಿಗೆ “ಬೀಚ್ ಕಾರ್ನಿವಲ್”(Beach Cornival) ಎನ್ನುವ ಅದ್ಭುತ ಕಾರ್ಯಕ್ರಮ ಜರುಗಲಿದೆ. ಅಂದು ಮದ್ಯಾಹ್ನ 3:30 ರಿಂದ  ಜಿಲ್ಲಾ ರಂಗಮಂದಿರದ ಆವರಣದಿಂದ ರವೀಂದ್ರನಾಥ ಟ್ಯಾಗೋರ್ ಕಡಲತೀರದವರೆಗೆ  ಅದ್ದೂರಿ ಮೆರವಣಿಗೆ ಇದೆ.

ವಿವಿಧ ರೀತಿಯ ವೇಷಭೂಷಣದೊಂದಿಗೆ, ವಿಧವಾದ ಆಕಾರದ ಫೇಸ್ ಮಾಸ್ಕ್ ಹೊಂದಿರುವ ಹತ್ತು ಹಲವು ಟ್ಯಾಬ್ಲೋಗಳು , ಮಕ್ಕಳನ್ನ ರಂಜಿಸುವ ಮಾಡೆಲ್ಸ್ ಗಳು   ಮೆರವಣಿಗೆಯ ಆಕರ್ಷಣಿಯವಾಗಲಿದೆ ಹಾಗೂ  ಚೈನೀಸ್ ಲೆಂಟರ್ನ್ ಆಕಾಶಕ್ಕೆ ಹಾರಿ ಬಿಡುವ ಸನ್ನಿವೇಶ  ಹಬ್ಬದ ವಾತಾವರಣ ಸೃಷ್ಟಿಸಲಿದೆ.

ಡಿಸೆಂಬರ್ 22ರಂದು ಬೆಳಿಗ್ಗೆ 6.30 ಕೆ ಕಡಲತೀರದಲ್ಲಿ ಬೀಚ್ ಮ್ಯಾರಾಥಾನ್,  ಸಂಜೆ 4 ಘಂಟೆಗೆ  ಕಡಲ ತೀರದಲ್ಲಿ ಗಾಳಿಪಟ ಉತ್ಸವ ನಡೆಸಲಾಗುವುದು. ಗಾಳಿಪಟ ಉತ್ಸವದಲ್ಲಿ ಸಾರ್ವಜನಿಕರೆಲ್ಲರು ಭಾಗವಾಸಿಸಬಹುದು.

ಕಡಲ ಉತ್ಸವದ ವಿಶೇಷ ಆಕರ್ಷಣೆಯಾಗಿ ಜನವರಿ ಒಂದರವರೆಗೆ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಸ್ಟಾಲ್ ಗಳು ಇರಲಿದೆ. ಕಾರ್ಯಕ್ರಮದ ಯಶಸ್ವಿಯಾಗಿ ಸಂಘಟಕರು ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಸವಿ ಅನುಭವಿಸಬೇಕೆಂದು ಸ್ಟಾರ್ ಚಾಯ್ಸ್ ಕಲಾಕೇಂದ್ರ  ಕೋರಿಕೊಂಡಿದೆ.

ಇದನ್ನು ಓದಿ : ಬಿಣಗಾದ ಇಂಡಸ್ಟ್ರಿಯಲ್ಲಿ ಕಾರ್ಮಿಕ ಸಂಶಯಾಸ್ಪದ ಸಾವು.

ಕುಡ್ಲೆ ಕಡಲತೀರದಲ್ಲಿ ಎರಡು ರಷ್ಯಾ ಪ್ರಜೆಗಳ ಜೀವ ರಕ್ಷಣೆ.

ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ತುಳಸಿ ಗೌಡ ಅವರ ಅಂತ್ಯ ಕ್ರೀಯೆ.