ಗೋಕರ್ಣ(Gokarn) : ಮೂವರು ಸ್ನೇಹಿತರೊಂದಿಗೆ ಕುಡ್ಲೇ ಕಡಲತೀರಕ್ಕೆ(Kudle Beach) ಬಂದಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ರಕ್ಷಿಸಿದ ಘಟನೆ ನಡೆದಿದೆ.

ಈಜಲು ತೆರಳಿದ್ದಾಗ ಈ ಘಟನೆ ನಡೆದಿದ್ದು  ರಷ್ಯಾದ  ಇರೀನಾ (37) ಆನ್ಯ(27)   ಸಮುದ್ರದ ಸುಳಿಗೆ  ಸಿಲುಕಿದವರು. ಒಟ್ಟು ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಲು ತೆರಳಿದ್ದಾಗ ಇಬ್ಬರು ಅಪಾಯಕ್ಕೆ ಸಿಲುಕಿದ್ದರು. ಇದನ್ನ ಗಮನಿಸಿದ ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕೂರ್ಲೆ ಹಾಗೂ ಮಂಜುನಾಥ್ ಎಸ್ ಹರಿಕಂತ್ರ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ತಕ್ಷಣ ರಕ್ಷಣೆಗೆ ತೆರಳಿದ್ದರು.

ಸಮುದ್ರದ ಅಲೆಯು ದೊಡ್ಡದಿರುವ ಕಾರಣ ಪ್ಯಾರಾ ಸೇಲಿಂಗ್ ಬೋಟ್ ಮೂಲಕ ಇಬ್ಬರೂ ವಿದೇಶಿ ಪ್ರಜೆಯನ್ನ ಅಪಾಯದಿಂದ ರಕ್ಷಿಸಿ ಮೇಲಕ್ಕೆ ತರಲಾಗಿದೆ. ಮೇಲಿಂದ ಮೇಲೆ ಗೋಕರ್ಣ ಕಡಲತೀರದಲ್ಲಿ ಪ್ರವಾಸಿಗರು ಮುಳುಗುತ್ತಿರುವ ಘಟನೆ ಸಾಮಾನ್ಯವಾಗಿದೆ.

ಇದನ್ನು ಓದಿ : ಸಕಲ ಸರ್ಕಾರಿ ಗೌರವಗಳೊಂದಿಗೆ ಪದ್ಮಶ್ರೀ ತುಳಸಿ ಗೌಡ ಅವರ ಅಂತ್ಯ ಕ್ರೀಯೆ.

ಬಾರದ ಲೋಕಕ್ಕೆ ಪಯಣಿಸಿದ  ನಾಡಿನ ಸಸ್ಯವಿಜ್ಞಾನಿ,  ಪದ್ಮಶ್ರೀ ತುಳಸಿ ಗೌಡ

ಭಟ್ಕಳದಲ್ಲಿ ಶಾಲಾ ವಾಹನಕ್ಕೆ ಬೆಂಕಿ. ವಿದ್ಯಾರ್ಥಿಗಳು ಪಾರು

Jಜೋಗ ಫಾಲ್ಸ್ ಗೆ ಪ್ರವೇಶ ನಿರ್ಬಂಧ. ಪ್ರವಾಸಿಗರೇ ಸಹಕರಿಸಿ.