ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi): ಪಂಚಾಯತ್ ಅಧಿಕಾರಿಯ ಕಿರುಕುಳದಿಂದಾಗಿ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗದ ಘಟನೆ ಹೊಸ ವರ್ಷದಂದೆ ನಡೆದಿದೆ.
ಉಡುಪಿ ತಾಲೂಕಿನ(Udupi Taluku) 23ನೇ ಬೈರಂಪಳ್ಳಿ ಗ್ರಾಮ ಪಂಚಾಯತ್ ನ (Bairampalli Grama Panchayat) ಬಾಗಿಲು ತೆರೆಯದ ಕಾರಣ ನಿತ್ಯದ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಅನುಭವಿಸಿದ್ದಾರೆ.
ಡಿಸೆಂಬರ್ 19ರಂದು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸದ ಒತ್ತಡ, ಅಧಿಕಾರಿಯ ಮಾನಸಿಕ ಕಿರುಕುಳದಿಂದ ಕಾರ್ಯನಿರ್ವಹಿಸಲು ಸಂಕಷ್ಟವಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರ ಸಲ್ಲಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ, ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಹೀಗಾಗಿ ಜನವರಿ 1ರ ಬುಧವಾರ ಹೊಸ ವರ್ಷದ ದಿನವೇ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಕಚೇರಿಗೆ ಹಾಜರಾಗಲಿಲ್ಲ.
ಗ್ರಾಮ ಪಂಚಾಯತ್ ಕಚೇರಿಗೆ ಬಂದ ಸಾರ್ವಜನಿಕರು ಸಿಬ್ಬಂದಿಗಳಿಲ್ಲದೆ ಪರದಾಡಬೇಕಾಯಿತು. ಅಸಮಾಧಾನಗೊಂಡ ಗ್ರಾಮಸ್ಥನೋರ್ವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಡುಪಿ(Udupi) ಜಿಲ್ಲಾಡಳಿತಕ್ಕೆ ತೀವ್ರ ಮುಜುಗರ ಉಂಟಾಗಿದೆ ಎನ್ನಲಾಗಿದೆ.
ತಕ್ಷಣ ದೌಡಾಯಿಸಿ ಬಂದ ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿ ಗ್ರಾಮ ಪಂಚಾಯತ್ ಕಚೇರಿಯ ಬಾಗಿಲು ತೆರೆದರು. ಆದರೂ ಸಿಬ್ಬಂದಿಗಳಿಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು.
ಇದನ್ನು ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣ ಈಗ ಪಿಟ್.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ನಿಧನ.
Jರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವು.
ಹೊಸ ವರ್ಷಕ್ಕೆ ಅರ್ಧ ದಿನವೇ ಗುರಿ ದಾಟಿ ಈ ಬಾರೀ 308 ಕೋಟಿ ರೂ. ಮದ್ಯ ಮಾರಾಟ.
	
						
							
			
			
			
			
