ಕಾರವಾರ(Karwar) : ಉತ್ತರಕನ್ನಡ(Uttarakannada) ಜಿಲ್ಲೆಯ ಮೂಲದ ಇಬ್ಬರು ಪತ್ರಕರ್ತರು ಸೇರಿ ರಾಜ್ಯದ ಹಲವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳಿಗೆ(Karnataka Madyama Academi Award) ಆಯ್ಕೆಯಾಗಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಶಿರಸಿ ಮೂಲದ(Sirsi Native) ಸಂಧ್ಯಾ ಹೆಗಡೆ ಅವರಿಗೆ 2023ರ ‘ಅಭಿಮನ್ಯು ಪ್ರಶಸ್ತಿ'(Abhimanyu Award) ದೊರೆತಿದೆ. ಹಾಲಿ ಮಂಗಳೂರಿನಲ್ಲಿ ಪ್ರಜಾವಾಣಿ (Mangalore Prajavani) ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಧ್ಯಾ ಹೆಗಡೆ ಅವರ ‘ಬೀಡಿಯಿಂದ ಕಮರಿದ ಕನಸು’ ವಿಶೇಷ ಬರಹಕ್ಕೆ ಅಕಾಡೆಮಿ ದತ್ತಿ ಪ್ರಶಸ್ತಿ ಲಭಿಸಿದೆ. ಕಳೆದ 24 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ ಭಟ್ಕಳ ಮೂಲದ(Bhatkal Native) ಆನಂದ ಪರಮೇಶ್ವರ್ ಬೈದನಮನೆ ಅವರಿಗೆ 2023ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ. ಎಂ.ಎ. ಪತ್ರಿಕೋದ್ಯಮ ಶಿಕ್ಷಣ ಪಡೆದ ಆನಂದ ಬೈದನಮನೆ ಪ್ರಸ್ತುತ ಏಷಿಯಾನೆಟ್ ಸುವರ್ಣ ನ್ಯೂಸ್ ನ (Suvarn News) ಪೊಲಿಟಿಕಲ್ ಬ್ಯೂರೋ ಹೆಡ್ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಪತ್ರಿಕೋದ್ಯಮ ಉಪನ್ಯಾಸಕರಾಗಿ, ಸಂಜೆವಾಣಿಯಲ್ಲಿ, 6 ವರ್ಷಗಳ ಕಾಲ ಈ ಟಿವಿ ಕನ್ನಡ(Etv Kannada) ಚಾನೆಲ್ ನಲ್ಲಿ ಚಿಕ್ಕಮಗಳೂರು(Chikkamanglore) ಜಿಲ್ಲಾ ವರದಿಗಾರರಾಗಿ, 3 ವರ್ಷಕ್ಕೂ ಹೆಚ್ಚು ಕಾಲ ಕಸ್ತೂರಿ ಚಾನೆಲ್ ನಲ್ಲಿ ಮುಖ್ಯವರದಿಗಾರರಾಗಿ ಬೆಂಗಳೂರಿನಲ್ಲಿ, 3 ವರ್ಷಕ್ಕೂ ಹೆಚ್ಚು ಕಾಲ ಜನಶ್ರೀ ವಾಹಿನಿಯಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಣೆ, 4 ವರ್ಷಗಳ ಕಾಲ ಟಿವಿ 9 (TV9) ವಾಹಿನಿಯಲ್ಲಿ ರಾಜಕೀಯ ವರದಿಗಾರರಾಗಿ ಬೆಂಗಳೂರಿನಲ್ಲಿ ಸೇವೆ, ಈಗ ಕಳೆದ 7 ವರ್ಷಗಳಿಂದ ಏಷಿಯಾನೆಟ್ ಸುವರ್ಣ ನ್ಯೂಸ್ ನಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿವಮೊಗ್ಗ ಮೂಲದ(Shivamogga Native) ಪ್ರಸ್ತುತ ಕಾರವಾರದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಸಂದೀಪ ಸಾಗರ ಅವರಿಗೆ 2024ರ ಸಾಲಿನ ಮಾದ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಅರಸಿ ಬಂದಿದೆ.
2012ರಿಂದ 2020ರವರೆಗೆ ಟಿವಿ9 ಕಾರವಾರ ಜಿಲ್ಲಾ ವರದಿಗಾರರಾಗಿ, 2020ರಿಂದ ನ್ಯೂಸ್ ಫಸ್ಟ್(News First) ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಪತ್ನಿ ಲಾವಣ್ಯ ಸಾಗರ್ ಮಾಲಿಕತ್ವದಲ್ಲಿ 2019ರಲ್ಲಿ ಆರಂಭವಾದ ನುಡಿಜೇನು(Nudijenu) ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸಂದೀಪ್ ಸಾಗರ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಕಾಡೆಮಿಯು ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 30 ಪತ್ರಕರ್ತರನ್ನು 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ.
ಇದನ್ನು ಓದಿ : ಬಸ್ ದರ ಏರಿಸಿ ಪುರುಷರಿಗೆ ಬರೆ ಎಳೆಯಲು ಮುಂದಾದ ಸರ್ಕಾರ.
ಮಗಳ ಮೇಲೆ ಅತ್ಯಾಚಾರ. ರೋಸಿ ಹೋದ ಪತ್ನಿಯಿಂದ ಪತಿ ಫಿನೀಶ್.