ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) :  ಮೀನು ಹಿಡಿಯವುದು ಒಂದು ಕಲೆ. ತಾಳ್ಮೆ ಇದ್ದರೆ ಮಾತ್ರ ಮೀನು ಹಿಡಿಯಬಹುದು. ಚಿಕ್ಕಂದಿನಿಂದ ಎಲ್ಲರೂ ಮೀನು ಹಿಡಿದಿದ್ದೇವೆ. ಆದರೆ ಬರಬರುತ್ತಾ ಮೊಬೈಲ್ ಕಾಲದಲ್ಲಿ ಮೀನು ಹಿಡಿಯೋದನ್ನ(Fish Catching) ಮರೆತಿದ್ದೇವೆ.

ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾನುವಾರ ವಿನೂತನವಾದ ಮೀನು ಹಿಡಿಯುವ ಸ್ಪರ್ಧೆ(Fish catching compitation) ನಡೆಸಲಾಯಿತು. ಯುವ ಮೀನುಗಾರರ ಸಂಘರ್ಷ ಸಮಿತಿ(Yuva meenugarara Sangharsha Samiti) ಆಶ್ರಯದಲ್ಲಿ ಮೀನುಗಾರ ಮುಖಂಡ ರಾಜು ತಾಂಡೇಲ ಅವರ ನೆನಪಿನಲ್ಲಿ ಹವ್ಯಾಸಿಗಳಿಗಾಗಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಬೈತಕೋಲ್ ಬಂದರು (Baitkol Bunder) ಸಮೀಪದ ಅಲೆತಡೆಗೊಡೆಯ ಎರಡು ಬದಿಯಲ್ಲಿ ಯುವಕರು ಮೀನು ಹಿಡಿಯಲು ಮುಂದಾದರು.  ಶ್ಯಾಮಲಾ ಗೌಡ ಎಂಬ ಮಹಿಳೆ ಸಹ  ಮೀನಿಗಾಗಿ ಗಾಳ ಹಾಕಿದ್ದು ವಿಶೇಷವಾಗಿತ್ತು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಸ್ಪರ್ಧೆಗೆ ಚಾಲನೆ ನೀಡಿದರು. ಭಾಗವಹಿಸಿದ ಸ್ಪರ್ದಾಳುಗಳು ತಾಸಿನಲ್ಲಿ ಸಖತ್ ಮೀನು ಹಿಡಿದು ಖುಷಿಪಟ್ಟರು.  ಗೋವಾ(Goa), ಪೂನಾ(Puna) ಸೇರಿ ವಿವಿಧ ಭಾಗಗಳಿಂದ ಒಟ್ಟು 47 ಸ್ಪರ್ಧಾಳುಗಳು ಭಾಗವಹಿಸಿದ್ದರು. ರೇಡಿಯಂ(Redium) ಹಾಗೂ ಕೈ ಗಾಳದ ಮೂಲಕ ಮೀನು ಹಿಡಿದರು.

ಕಾರವಾರ ತಾಲೂಕಿನ(Karwar Taluku) ಬೇಳೂರಿನ ತಿಲಕ್ ಗೌಡ ಎಂಬುವವರು 50 ಮೀನು ಹಿಡಿದು ಮೊದಲ ಬಹುಮಾನ ಪಡೆದುಕೊಂಡರು. ಗಣೇಶ ಗುನಗಿ 36 ಮೀನುಗಳನ್ನು ಹಿಡಿದು ದ್ವಿತೀಯ ಹಾಗೂ ಬಿಣಗಾದ ನಿರಂಜನ ಗೌಡ 30 ಮೀನುಗಳನ್ನ ಕ್ಯಾಚ್ ಮಾಡುವ ಮೂಲಕ ತೃತೀಯ ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ, ಬಿಜೆಪಿ(Bjp) ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕೆಪಿಸಿಸಿ(Kpcc) ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ನಗರಸಭೆ ಸದಸ್ಯರಾದ ರಾಜೇಶ್ ಮಾಜಾಳಿಕರ್, ಸ್ನೇಹಲ್ ಹರಿಕಂತ್ರ, ಉ.ಕ ಸಹಕಾರಿ ಮೀನು ಮಾರಾಟ ಫೇಡರೇಷನ್ ಅಧ್ಯಕ್ಷ ವೆಂಕಟೇಶ್ ತಾಂಡೇಲ್, ಕೋಮರಪಂಥ ಸಂಘದ ಅಧ್ಯಕ್ಷ ದೇವಿದಾಸ್ಬಂ ನಾಯ್ಕ, ಬಂದರು ಅಧಿಕಾರಿ ಸುರೇಶ ಶೆಟ್ಟಿ, ಮೀನುಗಾರ ಮುಖಂಡರಾದ ಪ್ರಮೋದ ಬಾನಾವಳಿಕರ್, ಸುಭಾಷ್ ದುರ್ಗೆಕರ್, ಸಂಪತ್ ಹರಿಕಂತ್ರ, ಗೌರೀಶ್ ಉಳ್ವೆಕರ್, ಪ್ರಶಾಂತ್ ತಾಂಡೇಲ್, ಮಂಜುನಾಥ್ ಟಾಕೆಕರ, ಪ್ರಶಾಂತ ಹರಿಕಂತ್ರ, ಯುವ ಮೀನುಗಾರರ ಸಂಘರ್ಷ ಸಮಿತಿ ಅಧ್ಯಕ್ಷ ವಿನಾಯಕ ಹರಿಕಂತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ವನಿತಾ ಮತ್ತು ಸೃಜನ್ ಕಾರ್ಯಕ್ರಮ ನಿರೂಪಿಸಿದರು.

ಇದನ್ನು ಓದಿ : ಗೃಹ ರಕ್ಷಕ ಇಲಾಖೆಗೆ  ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಗುಡ್ಡಕ್ಕೆ ಢಿಕ್ಕಿ.

ದೆಹಲಿಯಲ್ಲಿ ಪಕ್ಷದ ಗೆಲುವು. ಉತ್ತರಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತರ ಹಬ್ಬ.

ಮನೆಯ ಅಂಗಳದಲ್ಲಿದ್ದ ಅಡಿಕೆ ಚೀಲ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ.