ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ನವದೆಹಲಿ (Newdelhi): ಮಹಾಕುಂಭ ಮೇಳಕ್ಕೆ(Mahakumbha Mela) ತೆರಳಲು ವಿಶೇಷ ರೈಲ್ವೆ ವ್ಯವಸ್ಥೆ ಮಾಡಿದ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಗಿ 18  ಪ್ರಯಾಣಿಕರು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ಸಂಭವಿಸಿದೆ.

ರಾತ್ರಿ ಹತ್ತು ಗಂಟೆ ಸುಮಾರಿಗೆ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ ಇನ್ನೂ 11 ಜನರಿಗೆ ಗಾಯಗಳಾಗಿದ್ದು, ಅವರನ್ನು ಎಲ್‌ಎನ್ ಜೆಪಿ(LNJP) ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌ಪಿಎಫ್‌ (RPF) ಸಿಬ್ಬಂದಿ ತಕ್ಷಣ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೃತರಲ್ಲಿ ಐವರು ಮಕ್ಕಳು, 9 ಮಹಿಳೆಯರು ಸೇರಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ನವದೆಹಲಿ ನಿಲ್ದಾಣದಿಂದ (Newdelhi Station) ಪ್ರಯಾಗ್‌ರಾಜ್ ನಲ್ಲಿ (Prayagraj) ನಡೆಯುತ್ತಿರುವ  ಮಹಾಕುಂಭಮೇಳಕ್ಕೆ ರೈಲ್ವೆ ಇಲಾಖೆ (Railway Department) ಎರಡು ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಹೀಗಾಗಿ  ವಿವಿಧ ರಾಜ್ಯಗಳಿಂದ ಬಂದಿದ್ದ ಬಂದಿದ್ದ ನೂರಾರು ಪ್ರಯಾಣಿಕರು ಪ್ರಯಾಗರಾಜ್ ಗೆ ತೆರಳಲು ನವದೆಹಲಿ ರೈಲು ನಿಲ್ದಾಣದೊಳಗೆ ನುಗ್ಗಿದ್ದಾರೆ. ಪ್ಲಾಟ್‌ಫಾರ್ಮ್ ನಂಬರ್ 14 ಮತ್ತು 15ರಲ್ಲಿ ನಿಂತಿದ್ದ ಪ್ರಯಾಗ್‌ ರಾಜ್ ಹೊರಡುವ ವಿಶೇಷ ರೈಲಿನ(Special Train)  ಜನರಲ್ ಬೋಗಿಗೆ ಹತ್ತುವಾಗ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತವಾಗಿದೆ. ರೈಲು ಏರಲು ಒಂದೇ ಸಮನೇ ಜನರು ಧಾವಿಸಿದಾಗ ಕೆಲವರು ಆಯತಪ್ಪಿ ಬಿದ್ದಿದ್ದಾರೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್‌ (NDRF) ಸಿಬ್ಬಂದಿ, ರೈಲ್ವೆ, ದೆಹಲಿ ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದರು. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.

ಘಟನೆಗೆ ಪ್ರಧಾನಿ ಮೋದಿ ಸಂತಾಪ:  ಕಾಲ್ತುಳಿತ ದುರಂತದ ವಿಷಯ ತಿಳಿದು ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಜೊತೆ ನಾವಿರುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ತೊಂದರೆಗೊಳಗಾದವರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ

ಇದನ್ನು ಓದಿ : ಎಪಿಎಲ್ ಕಾರ್ಡ್ ಹೊಂದಿದವರಿಗೂ ಇನ್ಮುಂದೆ ಉಚಿತ ಚಿಕಿತ್ಸೆ.

ಡಾಬಾ ಬಂದಾಗ ಸತ್ತು ಬದುಕಿದ್ದ ವ್ಯಕ್ತಿ ಇದೀಗ ವಿಧಿವಶ

ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊ. ಕ್ಷುಲ್ಲಕ ಕಾರಣಕ್ಕಾಗಿ ಕೃತ್ಯ.

ಉಳವಿ ಯಾತ್ರಾರ್ಥಿ ತಂಡದ ಗಲಾಟೆ. ಒಂದು ತಂಡದಿಂದ ಇನ್ನೊಂದು ತಂಡದ ಮೇಲೆ ಹಲ್ಲೆ. ಪರಾರಿ.

ಮರಕ್ಕೆ ಢಿಕ್ಕಿ ಹೊಡೆದ ಪ್ರವಾಸಿಗರ ಇನ್ನೋವಾ ಕಾರು.