ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ (Udupi):  ಮೀನು ಕದ್ದ ಅರೋಪದ ಮೇಲೆ  ಮಹಿಳೆಯೋರ್ವಳನ್ನ ಮರಕ್ಕೆ ಕಟ್ಟಿ ಹಲ್ಲೆ (Assault) ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ತಾಲೂಕಿನ ಮಲ್ಪೆಯಲ್ಲಿ(Malpe) ಈ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.  ಮಲ್ಪೆ ಮೀನುಗಾರಿಕ ಬಂದರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು,  ಕೇವಲ ಮೀನು ಕದ್ದ ಆರೋಪದ ಹಿನ್ನಲೆಯಲ್ಲಿ ಮಹಿಳೆಗೆ ಕಪಾಳಕ್ಕೆ ಮಾಡಲಾಗಿದೆ.

ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುವ ಸಂದರ್ಭದಲ್ಲಿ ನೂರಾರು ಸಂಖ್ಯೆ ಯಲ್ಲಿ  ಜನ ಸೇರಿರುವ ದೃಶ್ಯ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಮಲ್ಪೆ ಪೊಲೀಸ್ ಠಾಣೆ(Malpe Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆಗೆ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಸಣ್ಣ ತಪ್ಪು ಮಾಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿರೋದು ತಪ್ಪು. ಹಲ್ಲೆ ನಡೆಸುವವರು ಒಂದು ಕಡೆಯಾದ್ರೆ ಉಳಿದವರು ನಗುತ್ತ ನಿಂತಿದ್ದರು. ಯಾರು ಕೂಡ ಹಲ್ಲೆ  ತಡೆಯುವ ಪ್ರಯತ್ನ ಮಾಡಲಿಲ್ಲ.  ಈಗಾಗಲೇ ಉಡುಪಿ ಎಸ್ಪಿಯವರಿಗೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ.  ಇನ್ನೊಂದು ಬಾರಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಡಿಸಿ ಹೇಳಿದ್ದಾರೆ.

ಇದನ್ನು ಓದಿ : ನಂಬಿದವರು ಕೈ ಕೊಟ್ಟರು. ನೀನೇ ನಮ್ಮನ್ನ ಕಾಪಾಡು. ದೈವದ ಮೊರೆ ಹೋದ ಮೀನುಗಾರರು.

ಬಾಹ್ಯಾಕಾಶ ವಾಸ ದಿಂದ ಭೂಮಿಗೆ ಮರಳಿದ ಸುನೀತಾ. ವಾರವಂತ ಹೋದವರು 9 ತಿಂಗಳು ಕಳೆದರು.

ಅಂಗನವಾಡಿ ಮಕ್ಕಳ, ಬಾಣಂತಿ ಮತ್ತು ಗರ್ಭಿಣಿಯರ ಆಹಾರ ಕಳ್ಳತನ. ಇಬ್ಬರ ಬಂಧನ ಕಾಂಗ್ರೆಸ್ ಮುಖಂಡ ಎಸ್ಕೇಪ್