ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಂಡ್ಯ (Mandya):  ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿಯೋರ್ವಳು ದುರಂತವಾಗಿ (Tragedy) ಸಾವನ್ನಪ್ಪಿದ ಘಟನೆ ಮಂಡ್ಯದ(Mandya) ಬಂದೀಗೌಡ ಬಡಾವಣೆಯ ಸಮೀಪ ನಡೆದಿದೆ.

ಸುಹಾನಾ (19) ಆತ್ಮಹತ್ಯಗೆ ಶರಣಾದ ಯುವತಿ. ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಸುಹಾನಾ ಶವವಾಗಿ ಪತ್ತೆಯಾಗಿದ್ದಾಳೆ. ಈಕೆ ಮೀಸಲು ಸಶಸ್ತ್ರ ಪಡೆಯ ಅನ್ಸರ್ ಪಾಷ ಎಂಬುವವರ ಮಗಳಾಗಿದ್ದು, ಮೈಸೂರಿನ (Mysore) ಖಾಸಗಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು.

ನಿನ್ನೆ ರಾತ್ರಿ ಮನೆಯಿಂದ ತನ್ನ ಸ್ಕೂಟರ್ ನಲ್ಲಿ ರೈಲು ಹಳಿ ಬಳಿ ಬಂದಿದ್ದ ಸುಹಾನ ಸ್ಕೂಟರ್ ನಿಲ್ಲಿಸಿ ರೈಲು ಹಳಿ ಬಳಿ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ(Railway Police Station) ಪ್ರಕರಣ ದಾಖಲಾಗಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನು ಓದಿ : ಮಲ್ಪೆಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ. ಅಮಾಯಕ ಮಹಿಳೆಯರ ಬಿಡುಗಡೆಗೆ ಆಗ್ರಹ.

ದಾಳಿ ಮಾಡಿದ ಕರಡಿಯೊಂದಿಗೆ ಕಾದಾಡಿದ ವ್ಯಕ್ತಿ. ಗಂಭೀರ  ಗಾಯ.

ಕಾರವಾರದಲ್ಲಿ ಮೆಡ್ ಸ್ಕ್ವೇರ್ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರ ಲೋಕಾರ್ಪಣೆ.