ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯುವ ರಂಜಾನ್ ಮಾರುಕಟ್ಟೆಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್(SP M Narayan)  ಮುಸಲ್ಮಾನ ಮುಖಂಡರೊಂದಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದರು.

ಭಟ್ಕಳ  ಮಜ್ಲಿಸ್-ಎ-ಇಸ್ಲಾ-ಒ-ತಂಜೀಮ್(Tanzeem) ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ರಬಿತಾ ಸೊಸೈಟಿಯ(Rabita Society) ಪ್ರಧಾನ ಕಾರ್ಯದರ್ಶಿ ಅತಿಕುರ್ ರೆಹಮಾನ್ ಮುನಿರಿ ಮತ್ತು ಭಟ್ಕಳ ಪುರಸಭೆಯ ಉಸ್ತುವಾರಿ ಅಧ್ಯಕ್ಷ ಅಲ್ತಾಫ್ ಖರುರಿ ಸೇರಿದಂತೆ ಸಮುದಾಯದ ಮುಖಂಡರು ಎಸ್ಪಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಅವರು ಭಟ್ಕಳ ಮಿನಿ ದುಬೈ(Mini Dubai) ಎಂದೇ ಪ್ರಸಿದ್ಧಿ ಹೊಂದಿದೆ. ರಂಜಾನ್ ಬಜಾರ್(Ramzan Bazar) ಸಿದ್ದತೆ ಭಟ್ಕಳ ಪುರಸಭೆಯಿಂದ ಆಗಿದ್ದು  ಇಲ್ಲಿಗೆ  ಒಂದು ಸಮುದಾಯ ಅಲ್ಲದೆ ಎಲ್ಲಾ ಸಮುದಾಯದ ಜನರು  ಜಿಲ್ಲೆಯಿಂದ ಬಂದು ತಮ್ಮ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ನಮ್ಮ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಭದ್ರತೆ ಮಾಡಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.
ಇದನ್ನು ಓದಿ : ತಾಯಿ ಹೆರಿಗೆ ಮಾಡಿದ 13 ವರ್ಷದ ಬಾಲಕ.

ನದಿಯಲ್ಲಿ ಬಿದ್ದ  ವಿದ್ಯುತ್‌ ಲೈನ್ ದುರಸ್ತಿ ಮಾಡಿದ ಹೆಸ್ಕಾಂ  ಸಿಬ್ಬಂದಿಗಳು.

ಬಡವಳಿಗೆ ಪರಿಹಾರ ನೀಡಲು ನಿರ್ಲಕ್ಷ್ಯ. ರೊಚ್ಚಿಗೆದ್ದ ಆರ್ ವಿ ದೇಶಪಾಂಡೆ.