ಗೋಕರ್ಣ(Gokarn): ಪ್ರವಾಸಿ ತಾಣ ಗೋಕರ್ಣದ ಕುಡ್ಲೇಬೀಚಿನಲ್ಲಿ ಈಜಲು ತೆರಳಿ ಅಪಾಯಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರನ್ನ ರಕ್ಷಿಸಲಾಗಿದೆ.
ಬಿಹಾರ್ ಮೂಲದ(Bihar Native) ಪ್ರದೀಪ್ ಗುಪ್ತ (29), ಅರ್ಪಿತ್ ಬೆಹೆರಾ (30) ಎಂಬುವವರು ರಕ್ಷಣೆಗೊಳಗಾದವರು. ಇಬ್ಬರು ಸ್ನೇಹಿತರು ನೀರಿನ ಸುಳಿಗೆ ಸಿಲುಕಿ ಕೂಗುತ್ತಿರುವುದನ್ನ ಗಮನಿಸಿದ ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕೂರ್ಲೆ ಮತ್ತು ಮಂಜುನಾಥ್ ಎಸ್ ಹರಿಕಂತ್ರ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ.
ಸ್ಪೀಡ್ ಬೋಟ್ ಮೂಲಕ ಸ್ಥಳಕ್ಕೆ ತೆರಳಿ ಇಬ್ಬರು ಪ್ರವಾಸಿಗರನ್ನ ರಕ್ಷಿಸಿ ಕರೆ ತಂದಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಗೋವಾದಲ್ಲಿ ಇನ್ಮುಂದೆ ಬಾಡಿಗೆ ಮನೆ ಪಡೆಯೋದು ಸುಲಭವಿಲ್ಲ.
ಪುಷ್ಪ ಚಿತ್ರದ ನಟ ಅಲ್ಲು ಅರ್ಜುನ್ ಆರೆಸ್ಟ್
ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಂಧನ.