ಭಟ್ಕಳ (BHATKAL): ಮುರ್ಡೇಶ್ವರ (MURDESHWAR) ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರಿನ ಗೌತಮ್ ಕೆ ವಿ (17) ಮೃತಪಟ್ಟ ದುರ್ದೈವಿ. ಇನ್ನೊರ್ವ ವಿದ್ಯಾರ್ಥಿ ಧನುಷ್ ಎಂಬಾತನನ್ನ ರಕ್ಷಣೆ ಮಾಡಲಾಗಿದೆ.

ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನಲ್ಲಿರುವ(BANGLORE JALAHALLI) ವಿದ್ಯಾ ಸೌಧ ಪಿಯು ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇಂದು ಕಾಲೇಜಿನಿಂದ ಒಟ್ಟು 220 ವಿದ್ಯಾರ್ಥಿಗಳು ಕಾಲೇಜು ಉಪನ್ಯಾಸಕರೊಂದಿಗೆ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು.

ಮುರ್ಡೇಶ್ವರ ಕಡಲತೀರದಿಂದ 2 ಕಿಲೋಮೀಟರ್  ದೂರದಲ್ಲಿ ಈಜಲು ಎಲ್ಲರೂ ನೀರಿಗಿಳಿದಿದ್ದರು. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಬಳಿಕ ಬಹಳ ಹೊತ್ತಾದ ನಂತರ ಓಡಿ ಬಂದು ಲೈಫ್ ಗಾರ್ಡ್ ಸಿಬ್ಬಂದಿಗಳ ನೆರವು ಯಾಚಿಸಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿಗಳು ಹುಡುಕಾಡಿದಾಗ ಓರ್ವನ ಶವ ಪತ್ತೆಯಾಗಿದೆ.

ಮುರ್ಡೇಶ್ವರ ಪೊಲೀಸ್ ಠಾಣಾ (MURDESHWAR POLICE STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಲವ್ ಜಿಹಾದ್ ಶಂಕೆ. ಅಧಿಕಾರಿಗಳಿಗೆ ಮನವಿ

ಬಿಜೆಪಿಯಲ್ಲಿ ನಿಷ್ಟಾವಂತರ ಕಡೆಗಣನೆ

ಗೋವಾ ಗಡಿಯಲ್ಲಿ ಜಲಯುದ್ಧ