ಭಟ್ಕಳ : ಜಿಲ್ಲೆಯಲ್ಲಿ ಡ್ರಗ್ಸ್ (DRUGS), ಮಟ್ಕಾ(MATKA), ಅಕ್ರಮ ರೇತಿ, ಕ್ಲಬ್(CLUB) ಹಾವಳಿ ಹೆಚ್ಚಿದೆ ಅನ್ನೋದು ಗೊತ್ತಾಗಿದೆ. ಒಂದು ವೇಳೆ ಇಂತಹ ಪ್ರಕರಣದಲ್ಲಿ ಪೊಲೀಸರು ಭಾಗಿಯಾದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ ಖಡಕ್ ಎಚ್ಚರಿಕೆ ನೀಡಿದರು.
ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊದಲ ಬಾರಿಗೆ ಭಟ್ಕಳಕ್ಕೆ ಅವರು ಭೇಟಿ ನೀಡಿದರು. ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬರುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಠಾಣೆಯ ಸಿಬ್ಬಂದಿಗೆ ವಿಸ್ತರಿಸಿದರು. ಈ ಹಿಂದೆ ಹೊನ್ನಾವರ (HONNAVAR), ಕಾರವಾರ(KARWAR) ಮತ್ತು ರಾಮನಗರ (RAMANAGAR)ದಲ್ಲಾದ ಘಟನೆಗಳನ್ನು ದೃಷಾಂತರಿಸಿ ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು, ಈ ರೀತಿಯ ಘಟನೆಗಳು ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ (CHILD HARASSMENT) ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಯಾವುದೇ ಪ್ರಕರಣವನ್ನೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ, ಬೇರೆ ರೀತಿಯಾದ ಬೆಳವಣಿಗೆಗಳಾಗುತ್ತೆ. ಅಂತಹವುಗಳಿಗೆ ಆಸ್ಪದ ನೀಡಬಾರದು ಎಂದು ಸೂಚನೆ ನೀಡಿದರು.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹೊಸ ಕಾನೂನಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಹೊಸದಾಗಿ ಸಾಮಾಜಿಕ ಸೇವೆ(community service) ಎನ್ನುವ ಕಾನೂನು ಜಾರಿಗೆ ಬಂದಿದೆ. ಪದೇ ಪದೇ ಓರ್ವ ವ್ಯಕ್ತಿ ಸಣ್ಣ ಪುಟ್ಟ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದರೆ ಸ್ವಚ್ಛತೆ ಕೆಲಸಗಳಿಗೆ ಆತನನ್ನು ತೊಡಗಿಸಿಕೊಳ್ಳಲಾಗುವದು ಎಂದರು.
ನಾಳೆಯಿಂದಪೊಲೀಸ್ಡೇ (POLICE DAY): ಹದಿಹರೆಯದ ಯುವಕರು ಡ್ರಗ್ಸ್ ಗಾಂಜಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ದುಶ್ಚಟಗಳಿಗೆ ಬಲಿಯಾಗಬಾರದು ಎನ್ನುವ ಉದ್ದೇಶಕ್ಕಾಗಿ ಹಾಗೂ ಪೋಕ್ಸೊ ಪ್ರಕರಣ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಲು ನಾಳೆಯಿಂದ ಪ್ರತಿ ದಿನ ಶಾಲಾ_ಕಾಲೇಜುಗಳಲ್ಲಿ “ಪೊಲೀಸ್ ಡೇ” ಎನ್ನುವ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
5 ವರ್ಷಕ್ಕಿಂತ ಮೇಲೆ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡುವ ತೀರ್ಮಾನವನ್ನು ಡಿ.ವೈಎಸ್ಪಿ ಗಳ ಜೊತೆಯಲ್ಲಿ ಮಾತುಕತೆ ನಡೆಸಿ ಮಾಡಲಾಗುವುದು.
ಠಾಣೆಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿಗೆ ಭಟ್ಕಳ ನಗರ ಠಾಣೆ ಪೊಲೀಸರು ಗೌರವ ವಂದನೆ ಸಲ್ಲಿಸಿ ಬರಮಾಡಿಕೊಂಡರು. ಬಳಿಕ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವರಿಷ್ಠಾಧಿಕಾರಿಗಳು, ಠಾಣೆಯ ಆಗುಹೋಗುಗಳ ಬಗ್ಗೆ ವಿಚಾರಿಸಿದರು. ಸಿಬ್ಬಂದಿ ಸಂಖ್ಯೆ, ಪ್ರಕರಣಗಳ ಸಂಖ್ಯೆ, ಭಟ್ಕಳದಂತ ಸೂಕ್ಷ್ಮ ಸ್ಥಳದಲ್ಲಿ ಪೊಲೀಸ್ ಕಾರ್ಯಾಚರಣೆ ಹೇಗಿರಬೇಕು ಎನ್ನುವುದರ ಬಗ್ಗೆ ವಿವರಿಸಿದರು.
ಭಟ್ಕಳಸಾರ್ವಜನಿಕರು (BHATKAL PUBLIC) ಮತ್ತುತಂಜಿಮ್ (TANZEEM)ನಿಂದ ಸ್ವಾಗತ : ಭಟ್ಕಳದ ಸಾರ್ವಜನಿಕರು ಹಾಗೂ ತಂಜೀಮ್ ಸದಸ್ಯರು ಪೊಲೀಸ್ ವರಿಷ್ಠಾಧಿಕಾರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿ, ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶ ಎಂ.ಕೆ., ನಗರ ಠಾಣೆ ಸಿ.ಪಿ.ಐ. ಗೋಪಿಕೃಷ್ಣ, ಗ್ರಾಮೀಣ ಸಿ.ಪಿ.ಐ. ಚಂದನ ಗೋಪಾಲ ಮತ್ತಿತರರು ಉಪಸ್ಥಿತರಿದ್ದರು