ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು (Bangaluru): ಖ್ಯಾತ ಗಾಯಕ ಸೋನು ನಿಗಮ್ಗೆ(Sonu Nigam) ತಾತ್ಕಾಲಿಕ ನಿರ್ಬಂಧ ಹೇರಲು ಫಿಲ್ಮ್ ಚೇಂಬರ್(Film Chamber) ನಿರ್ಧಾರ ಮಾಡಿದೆ.
ಗಾಯಕ ಸೋನು ನಿಗಮ್(Sonu nigam) ವಿರುದ್ಧ ಸ್ಯಾಂಡಲ್ವುಡ್(Sandalwood) ಮಹತ್ವದ ನಿರ್ಧಾರ ಕೈಗೊಂಡಿದೆ. ಸೋನು ನಿಗಮ್ ಬ್ಯಾನ್ ವಿಚಾರವಾಗಿ ಇಂದು ಫಿಲ್ಡ್ ಚೇಂಬರ್ನಲ್ಲಿ ಪದಾಧಿಕಾರಿಗಳು, ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ.
ಕನ್ನಡ.. ಕನ್ನಡ ಎಂದವರನ್ನು ಪಹಲ್ಲಾಮ್ಗೆ ಹೋಲಿಸಿದ್ದಕ್ಕೆ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಿಗರ ಭಾವನೆ ಮತ್ತು ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಮಣಿದಿರುವ ಫಿಲ್ಡ್ ಚೇಂಬರ್ ಕ್ಷಮೆ ಕೇಳೋತನಕ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರ ಮಾಡಿದೆ.
ಫಿಲ್ಡ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಸೋನು ನಿಗಮ್ ಕನ್ನಡಿಗರ ಕ್ಷಮಾಪಣೆ ಕೇಳೋ ತನಕ ಹತ್ತಿರ ಸೇರಿಸಲ್ಲ. ಇಂದಿನ ಸಭೆಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋನು ನಿಗಮ್ ಅವರು ಕ್ಷಮಾಪಣೆ ಕೇಳೋ ತನಕ ತಾವು ಬಿಡೋದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಮಂಗಳೂರು ಬಳಿಕ ಮತ್ತೋರ್ವ ರೌಡಿ ಶೀಟರ್ ಫಿನಿಷ್.
ಪತಿಯ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ
ಪುಟಾಣಿಗಳಿಂದ ಸ್ಕೆಟಿಂಗ್ ಮೂಲಕ ಶ್ರದ್ಧಾಂಜಲಿ. ನಮ್ಮ ಸೇನಾಪಡೆ ತಕ್ಕ ಉತ್ತರ ನೀಡಲಿದೆ : ಶಾಸಕ ಸೈಲ್.