ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar):  ಉತ್ತರಕನ್ನಡ  ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರ ನಕಲಿ ಖಾತೆಯನ್ನು(Fake account)  ಕಿಡಿಗೇಡಿಗಳು  ಫೇಸ್ಬುಕ್ ನಲ್ಲಿ(Facebook)  ತೆರೆದು ವಂಚನೆಗೆ ಮುಂದಾದ ಸಂಗತಿ ಗೊತ್ತಾಗಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ (Police Department) ಪ್ರಕಟಣೆ ನೀಡಿ ಎಚ್ಚರಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರ ಭಾವಚಿತ್ರ ಹೊಂದಿರುವ ಕೆ. ಲಕ್ಷ್ಮೀಪ್ರಿಯ, ಐಎಎಸ್ ಎಂಬ ಯೂಸರ್ ನೇಮ್ ಹಾಗು ಭಾವಚಿತ್ರ ಹೊಂದಿರುವ ನಕಲಿ ಖಾತೆಯನ್ನು ಯಾರೋ ಕಿಡಿಗೇಡಿಗಳು ರಚಿಸಿ, ಬೇರೆಯವರಿಗೆ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಈ ನಕಲಿ ಖಾತೆಯಿಂದ ಸಾರ್ವಜನಿಕರಿಗೆ ಫ್ರೆಂಡ್ ರಿಕ್ವೆಸ್ಟ್ ಸಂದೇಶಗಳು ಬರುತ್ತಿದೆ.

ಅದು ಜಿಲ್ಲಾಧಿಕಾರಿಗಳ ಅಧಿಕೃತ ಅಕೌಂಟ್ ಆಗಿರುವುದಿಲ್ಲ. ಆದ್ದರಿಂದ ಈ ಫೇಕ್ ಅಕೌಂಟ್ನಿಂದ ಸಂದೇಶಗಳು (Fake Account message) ಬಂದಲ್ಲಿ ಸಾರ್ವಜನಿಕರು ಗಮನ ಕೊಡಬಾರದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದಾರೆ. ಜಿಲ್ಲಾಧಿಕಾರಿಗಳ ಹೆಸರು ಫೋಟೋ ಬಳಸಿ ನಕಲಿ ಫೇಸ್ಬುಕ್ ಆಕೌಂಟ್ ತೆರೆದ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಕಾರವಾರದ ಸಿ.ಇ.ಎನ್. ಪೊಲೀಸ್ ಠಾಣೆಗೆ (CEN Police Station) ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಶ್ವಾನವನ್ನ  ಬೈಕ್ ಗೆ ಕಟ್ಟಿ ದರದರನೇ ಎಳೆದೋಯ್ದ ಭೂಪ. ಪೊಲೀಸರಿಂದ ಸೋಮೊಟೊ ಪ್ರಕರಣ.

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ. ನಾಲ್ವರಿಗೆ ಗಾಯ

ಬೋಟಲ್ಲಿ ಕುಸಿದು ಬಿದ್ದು ಕಾರ್ಮಿಕ ಅನುಮಾನಾಸ್ಪದ ಸಾವು.