ಭಟ್ಕಳ(BHATKAL) : ಅರಬ್ಬೀ ಸಮುದ್ರದಲ್ಲಿ ಅಲೆಯ ಅಬ್ಬರ ಜಾಸ್ತಿಯಾಗಿದ್ದು, ಮೀನುಗಾರರು ಬೋಟುಗಳನ್ನ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಈ ನಡುವೆ ಭಟ್ಕಳ ತಾಲೂಕಿನ ತೆಂಗಿನಗುಂಡಿ(TENGINAGUNDI) ಸಮೀಪ ಆಳ ಸಮುದ್ರ(DEEPSEA) ಮೀನುಗಾರಿಕೆ ನಡೆಸುವ ಬೋಟ್ ಅವಘಡಕ್ಕೆ ಸಿಲುಕಿದೆ. ಮಲ್ಪೆಯ ಕುಲಮಾಸ್ತ್ರಿ ಹೆಸರಿನ ಬೋಟ್ ಕಡಲಅಲೆಗೆ ಸಿಲುಕಿ ತಡೆಗೋಡೆಗೆ ಬಂದು ಬಡಿದಿದೆ.
ನಿನ್ನ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಹವಮಾನ ವೈಫರಿತ್ಯದಿಂದ ಬೋಟಿನ ಬಲೆ ಪ್ಯಾನಿಗೆ ಸಿಕ್ಕಿಬಿದ್ದಿತು. ಆಗ ಬೋಟ್ ಸ್ಟಾರ್ಟ್ ಆಗದಿದ್ದಾಗ ಮತ್ತೊಂದು ಬೋಟಿನವರು ಬೋಟನ್ನು ಕಟ್ಟಿ ತೆಂಗಿನಗುಂಡಿ ಬಂದರು ಕಡೆ ಎಳೆದು ತರುತ್ತಿದ್ದರು. ಈ ಸಂದರ್ಭದಲ್ಲಿ ಅಲೆಯ ರಭಸಕ್ಕೆ ಕಟ್ಟಿದ ಹಗ್ಗ ತುಂಡಾಗಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಹೀಗಾಗಿ ಕುಲಮಾಸ್ತ್ರಿ ಬೋಟ್ ತಡೆಗೋಡೆಗೆ ಅಪ್ಪಳಿಸಿದೆ. ಪರಿಣಾಮವಾಗಿ ಡ್ಯಾಮೇಜ್ ಆಗಿದೆ. ಆವಘಡದಿಂದ ಲಕ್ಷಾಂತರ ರೂ ಹಾನಿ ಸಂಭವಿಸಿದೆ. ಭಟ್ಕಳ ಗ್ರಾಮೀಣ ಠಾಣಾ(BHATKAL RURAL STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
ಇದನ್ನು ಓದಿ : ಲಕ್ಷಾಂತರ ರೂ ಮೌಲ್ಯದ ಮದ್ಯ ಚರಂಡಿ ಪಾಲು