ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಆಟೋ ರಿಕ್ಷಾದಲ್ಲಿ ಮರೆತು ಹೋಗಿದ್ದ ಪ್ಯಾಸೆಂಜರ್ ಓರ್ವರ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವಿದ್ದ ಬ್ಯಾಗನ್ನು(Gold Bag) ಮರಳಿಸುವ ಮೂಲಕ ಆಟೋ ಚಾಲಕರೊಬ್ಬರು(Auto Driver) ಮಾನವೀಯತೆ(Humanity) ಮೆರೆದ ಘಟನೆ ಭಟ್ಕಳದಲ್ಲಿ ನಡೆದಿದೆ.
ತಾಲೂಕಿನ ತೆಂಗಿನಗುಂಡಿ ನಿವಾಸಿಯಾದ ಆಟೋ ಚಾಲಕ ಮೋಹನ್ ತಿಮ್ಮಪ್ಪ ನಾಯ್ಕ ಪ್ರಾಮಾಣಿಕತೆ ಮೆರೆದವರಾಗಿದ್ದಾರೆ. ಕುಮಟಾ ನಿವಾಸಿ(Kumta Native) ಸವಿತಾ ಮಹಾಬಲೇಶ್ವರ ಅಂಬಿಗ ಎಂಬುವವರು ಹೆಬಳೆಯಿಂದ ಭಟ್ಕಳದ ಹೊಸ ಬಸ್ ನಿಲ್ದಾಣಕ್ಕೆ(Bhatkal ) ಆಟೋ ರಿಕ್ಷಾದಲ್ಲಿ ಆಗಮಿಸಿದ್ದರು. ಕುಮಟಾಕ್ಕೆ ತೆರಳುವ ಗಡಿಬಿಡಿಯಲ್ಲಿ ಅವರು ತಮ್ಮ ಬಟ್ಟೆಗಳು ಹಾಗೂ ಸುಮಾರು 8 ತೊಲೆ ಬಂಗಾರದ ಆಭರಣಗಳಿದ್ದ ಬ್ಯಾಗನ್ನು(Ornaments Bag) ರಿಕ್ಷಾದಲ್ಲೇ ಮರೆತು ಮುಂದೆ ಸಾಗಿದ್ದರು.
ನೆನಪಾಗಿ ತಕ್ಷಣ ರಿಕ್ಷಾ ಚಾಲಕರಲ್ಲಿ ವಿಚಾರಿಸಿದ್ದರು.ಈ ವಿಷಯ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಮಾಹಿತಿಯನ್ನು ಗಮನಿಸಿದ ಚಾಲಕ ಮೋಹನ್ ನಾಯ್ಕ ಅವರು ತಕ್ಷಣ ತಮ್ಮ ರಿಕ್ಷಾವನ್ನು ಪರಿಶೀಲಿಸಿದಾಗ, ಪ್ರಯಾಣಿಕರು ಕುಳಿತುಕೊಳ್ಳುವ ಹಿಂಭಾಗದಲ್ಲಿ ಬ್ಯಾಗ್ ಇರುವುದು ಕಂಡುಬಂತು. ಬಳಿಕ ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ(Bhatkal Town Police) ತೆರಳಿ ಬ್ಯಾಗನ್ನು ಒಪ್ಪಿಸಿದ್ದಾರೆ. ನಂತರ ಠಾಣೆಯ ಎಎಸ್ಐ ಮಂಜುನಾಥ ಗೌಡರ್ ಅವರ ಸಮ್ಮುಖದಲ್ಲಿ ಬ್ಯಾಗನ್ನು ಅದರ ವಾರಸುದಾರರಾದ ಸವಿತಾ ಅವರಿಗೆ ಹಸ್ತಾಂತರಿಸಲಾಯಿತು. ಬ್ಯಾಗಿನಲ್ಲಿದ್ದ ಎಂಟು ತೊಲೆ ಬಂಗಾರ ಹಾಗೂ ಇತರೆ ವಸ್ತುಗಳು ಸುರಕ್ಷಿತವಾಗಿದ್ದವು ಎಂದು ಸವಿತಾ ಅವರು ಗೊತ್ತುಪಡಿಸಿಕೊಂಡಿದ್ದಾರೆ.
ಆಟೋ ಚಾಲಕ ಮೋಹನ್ ತಿಮ್ಮಪ್ಪ ನಾಯ್ಕ ಅವರ ಪ್ರಾಮಾಣಿಕ ಕಾರ್ಯಕ್ಕೆ ಸವಿತಾ ಥ್ಯಾಂಕ್ಸ್ ಹೇಳಿದ್ದಾರೆ. ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ನಿವತ್ತ ಯೋಧನಿಗೆ ಅದ್ದೂರಿ ಸ್ವಾಗತ. ಎಲ್ಲೆಡೆ ಜಯಕಾರ.
ಮುಂಡಗೋಡ ಪಿಎಸ್ಐ ಯಲ್ಲಾಲಿಂಗ ಕುನ್ನೂರು ವಿಧಿವಶ. ಕಂಬನಿ ಮಿಡಿದ ಸಹದ್ಯೋಗಿಗಳು.
ಪತಿ–ಪತ್ನಿ ಕಲಹ. ತಾಯಿಯೊಂದಿಗೆ ಇರಲು ಬಯಸದ ಮಕ್ಕಳು. ಭಾವನ ಮುಗಿಸಿದ ಕಿರಾತಕಿ.
ಜೈಲಿನಲ್ಲಿ ನಿಲ್ಲದ ಖೈದಿಗಳ ಉಪಟಳ. ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪೂರೈಕೆ
