ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ಸಭ್ಯಸ್ಥರು, ಸುಶಿಕ್ಷಿತರು ಎಂದು ಹೇಳಲಾಗುತ್ತಿರುವ ಅಂಕೋಲಾದಲ್ಲಿ(Ankola) ಈಗ ಅಕ್ರಮ ಜೂಜಾಟದ ಕಾರುಬಾರು ಜೋರಾಗಿದೆ. ಇತ್ತೀಚಿನ ದಿನಗಳಲ್ಲಿ ಅಂಕೋಲಾದ ಮಾನ ಹರಾಜಾಗುತ್ತಿದೆ.
ತಾಲೂಕು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿಯೇ ಖಾಕಿಯ ನೆರಳಲ್ಲಿ ಅಕ್ರಮ ದಂದೆ(Illegal Activities) ನಡೆಯುತ್ತಿರೋದು ಬಹಿರಂಗವಾಗಿದೆ. ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮ ನಡೆದರೂ ಜೂಜಾಟದ ಅಡ್ಡೆಗಳು ಎದ್ದು ನಿಲ್ಲುತ್ತವಂತೆ. ಕೆಲ ಪ್ರಭಾವಿ ವ್ಯಕ್ತಿಗಳ ಕೃಪಾಕಟಾಕ್ಷದಲ್ಲಿ ಅಕ್ರಮ ದಂದೆ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇಲ್ಲಿನ ಲಕ್ಷ್ಮೇಶ್ವರದ ದೈವಜ್ಞ ಕಲ್ಯಾಣ ಮಂಟಪದ ಎದುರು ನಡೆಯುತ್ತಿದ್ದ ಜೂಜಾಟದ(Joojata) ಅಡ್ಡೆಯ ಮೇಲೆ ಅಂಕೋಲಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸೂಚನೆ ಹಿನ್ನಲೆಯಲ್ಲಿ ನಡೆದಿದೆ. ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಣ್ಣೆಮಡಿಯ ಶಂಕರ, ಬೊಬ್ರುವಾಡದ ನವೀನ ರತ್ನಾಕರ, ಹೊಸ್ಕಟ್ಟಾದ ಈಶ್ವರ ಹರಿಕಂತ್ರ, ಕನಸಿಗದ್ದೆಯ ದೀಪಕ ನಾಯ್ಕ, ಹಾರವಾಡದ ಸಂದೀಪ ನಾಯ್ಕ ಹಾಗೂ ಪೂಜಗೇರಿಯ ಸತೀಶ ಪುಟ್ಟು ಆರೋಪಿಗಳಾಗಿದ್ದಾರೆ. ಇವರಿಂದ 2,360 ನಗದು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೊಯಿಡಾ ತಾಲೂಕಿನ ಉಳವಿಯಲ್ಲಿ ಜಾತ್ರೆಯ ಸಂದರ್ಭದಲ್ಲಿ ನಡೆದ ‘ಅಂದರ್-ಬಾಹರ್’ ಜೂಜಾಟದ ಸ್ಥಳಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಹತ್ತು ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಳಗಾವಿ ಅನಗೋಳ ನಿವಾಸಿಗಳಾದ ಬಸವರಾಜ, ಮಂಜುನಾಥ, ಚಂದ್ರಪ್ಪ, ಈರಪ್ಪ ಹಾಗೂ ಮುದಕಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, 20,700 ನಗದು ವಶಪಡಿಸಿಕೊಳ್ಳಲಾಗಿದೆ.ಎರಡನೇ ಪ್ರಕರಣದಲ್ಲಿ ಬೈಲಹೊಂಗಲದ ಶಿವಾನಂದ ಮಹೇಶ್, ನಾಗರಾಜ, ಬಾಳಪ್ಪ ಹಾಗೂ ಸವದತ್ತಿಯ ರಿಜ್ವಾನ್ ವಿರುದ್ಧ ಪ್ರಕರಣ ದಾಖಲಿಸಿ, 3,720 ವಶಕ್ಕೆ ಪಡೆಯಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ(Ankola) ಜಿಲ್ಲೆಯಲ್ಲಿ ಅತ್ಯಧಿಕ ಶಿಕ್ಷಕ ಕುಟುಂಬವಿದೆ. ಉನ್ನತ ಹುದ್ದೆಯಲ್ಲಿರುವವರು ಸಾಕಷ್ಟು ಮಂದಿ ಇದ್ದಾರೆ. ಇವರ ನಡುವೆ ಅಕ್ರಮ ದಂದೇಕೋರರು ನಾಯಿಕೊಡೆಯಂತೆ ಹುಟ್ಡಿಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ತಾಲೂಕು ಪಟ್ಟಣಗಳಲ್ಲಿ ಅಕ್ರಮ ದಂದೆ ಜೋರಾಗಿ ನಡೆಯುತ್ತಿದೆ.
‘ಅಂದರ್-ಬಾಹರ್’, ಇಸ್ಪೀಡ್, ಕೋಳಿ ಅಂಕ, ‘ಜೂಜಾಟದಂತ ಆಟಕ್ಕೆ ಕುಮ್ಮುಕ್ಕು ನೀಡುತ್ತಿರುವವರು ಯಾರು?. ಅಂಕೋಲಾದ ಮಾನ ಕಳೆಯುವವರ ಮೇಲೆ ಯಾಕೆ ಪ್ರಜ್ಞಾವಂತರು ಚಾಟಿ ಬೀಸುತ್ತಿಲ್ಲ. ಪೊಲೀಸ್ ಇಲಾಖೆ(Police Department) ಮನಸ್ಸು ಮಾಡಿದರೆ ನಿಯಂತ್ರಿಸಬಹುದು. ಆದರೆ ಅವರ ಕೈ ಕಟ್ಟಿ ಹಾಕುವವರು ಯಾರು? ಯಾರೆಲ್ಲ ಶಾಮೀಲಾಗಿದ್ದಾರೆಂಬುದು ಅಂಕೋಲಾದ ಜನತೆಗೆ ಗೊತ್ತಿರದ ವಿಷಯವೇನಲ್ಲ. ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕಿದೆ. ಅವರು ಅಂಕೋಲಿಗರ(Ankoligas) ಸಹಕಾರ ಪಡೆದು ನಿಯಂತ್ರಿಸಬಹುದು. ಇದೇ ರೀತಿ ಮುಂದುವರಿದರೇ ಅಂಕೋಲಿಗರು ಸಿಡಿದೇಳುವ ಕಾಲ ದೂರವಿಲ್ಲ.
ಇದನ್ನು ಓದಿ : ಕಾರವಾರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಬೆಂಕಿ
