ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರ ರೋಟರಿ ಕ್ಲಬ್ಬಿನ ಸದಸ್ಯ ರಾಘವೇಂದ್ರ ಜಿ. ಪ್ರಭು ಅವರಿಗೆ 2024-25ನೇ ಸಾಲಿನ ಎಕ್ಸ್ಟ್ರಾರ್ಡಿನರಿ ಅಸಿಸ್ಟಂಟ್ ಗವರ್ನರ್ ಡಿಸ್ಟ್ರಿಕ್ಟ್ ಅವಾರ್ಡ್(Extraordinary Assistant Governed District Award) ನೀಡಿ ಗೌರವಿಸಿದರು.
ಮಹಾರಾಷ್ಟ್ರ ಕೊಲ್ಲಾಪುರದ(Maharashtra Kollapur) ಹೊಟೆಲ್ ವಿಜಯ ಪ್ಯಾಲೇಸ್ ನಲ್ಲಿ ನಡೆದ 67ನೇ ಡಿಸ್ಟ್ರಿಕ್ಟ್ ಕಾನ್ಸರೆನ್ಸ್‌ನಲ್ಲಿ ಬೆಳಗಾವಿಯ ಡಿಸ್ಟ್ರಿಕ್ಟ್ ಗವರ್ನರ್ ಶರದ ಪೈ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ರಾಘವೇಂದ್ರ ಜಿ. ಪ್ರಭು ಅವರು ಕಾರವಾರ ರೋಟರಿ ಕ್ಲಬ್‌ಗೆ(Karwar Rotary Club) 2008ರಲ್ಲಿ ಸದಸ್ಯರಾಗಿ ಸೇರ್ಪಡೆಯಾಗಿ 2012-13ರಲ್ಲಿ ಕಾರ್ಯದರ್ಶಿಯಾಗಿ, 2022-23ನೇ ಸಾಲಿನಲ್ಲಿ ಕ್ಲಬ್ಬಿನ ಅಧ್ಯಕ್ಷರಾಗಿ ಮುಂದೆ ಹಲವಾರು ಆಫೀಸರ್ಸ್ ಹುದ್ದೆಗಳನ್ನು ನಿರ್ವಹಿಸಿದ್ದರು. ರೋಟರಿ ಡಿಸ್ಟ್ರಿಕ್ಟ್ ಲೇವಲ್ ಲೀಡರ್ಶಿಪ್ ಪಡೆದುಕೊಂಡು 2024-25ನೇ ಸಾಲಿನ ಉತ್ತರ ಕನ್ನಡ ಜಿಲ್ಲೆಯ(Uttarakannada District) ಅಸಿಸ್ಟಂಟ್ ಗವರ್ನರ್ ಆಗಿ ನೇಮಕಗೊಂಡು ಪ್ರಸಕ್ತ ಸಾಲಿನಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದರು.
ತಮಗೆ ಮೇಲ್ವಿಚಾರಣೆ ನಿರ್ವಹಿಸಲು ಹಂಚಲಾದ ಉತ್ತರ ಕನ್ನಡ ಜಿಲ್ಲೆಯ (1) ರೋಟರಿ ಕ್ಲಬ್ ಆಫ್ ಕಾರವಾರ ಸೀಸೈಡ್(Rotary Club of Karwar Seaside). (2) ರೋಟರಿ ಕ್ಲಬ್ ಆಫ್ ಶಿರಸಿ(Rotary Club Of Sirsi), (3) ರೋಟರಿ ಕ್ಲಬ್ ಆಫ್ ಹೊನ್ನಾವರ(Rotary Club Of Honnavar), (4) ರೋಟರಿ ಕ್ಲಬ್ ಆಫ್ ಅಂಕೋಲಾ(Rotary Club Of Ankola), (5) ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್(Rotary Club of Ankola Rural), ಇವು 5 ಕ್ಲಬ್‌ಗಳ ಮೇಲ್ವಿಚಾರಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ತಮಗೆ ನೀಡಿದ ಹೊಣೆಗಾರಿಕೆಗಳನ್ನು ಬಹಳ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿ ಇಂದು ಎಕ್ಸ್ಟ್ರೊರ್ಡಿನರಿ ಅಸಿಸ್ಟಂಟ್ ಗವರ್ನರ್ ಪ್ರಶಸ್ತಿಯನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
ರಾಘವೇಂದ್ರ ಅವರ ಕಾರ್ಯಕ್ಷಮತೆ ಡಿಸ್ಟ್ರಿಕ್ಟ್ ಮತ್ತು ಇಂಟರ್ನ್ಯಾಷನಲ್ ಲೇವಲ್‌ಗಳಲ್ಲಿ ಗುರುತಿಸಲಾಗಿದೆ. ಇವರ ಸೇವಾ ಕಾರ್ಯಪ್ರವೃತ್ತಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಮ್ಮ ರೋಟರಿ ಇಂಟರ್ನ್ಯಾಷನಲ್ ಜೊತೆಗೆ ನಡೆಯಲಿ ಎಂದು ಅಭಿನಂದಿಸಿದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಡಾ. ಅರ್ಜುನ ಉಪಾಧ್ಯಾಯ. ವಿನೋದ ಕೊಠಾರಕ, ಮೋಹನ ನಾಯ್ಕ, ಗುರುದತ್ತ ಬಂಟ, ಡಾ. ಸಮೀರಕುಮಾರ ನಾಯಕ, ಪ್ರಶಾಂತ ಕೊಡಾರಕರ ಉಪಸ್ಥಿತರಿದ್ದರು.
ಇದನ್ನು ಓದಿ : ಪೊಲೀಸರ ಕಾರ್ಯಾಚರಣೆ. ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ.
ಮದುವೆಗೆ ಚಿನ್ನ ಖರೀದಿಸಲು ಬಂದು ನಾಪತ್ತೆಯಾದ ಯುವಕ. ವಿದೇಶದಲ್ಲಿದ್ದವ ಕೂಲಿಯಾಗಿದ್ದೇಕೆ?
