ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ (Bhatkal) : ಡಾ. ಗಂಗೂಬಾಯಿ ಹಾನಗಲ್ ಯುನಿವರ್ಸಿಟಿಯವರು(Dr Gangubayi Hanagal University) ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಭಟ್ಕಳ(Bhatkal) ತಾಲೂಕಿನ ಶಿರಾಲಿಯ(Shirali) ಧನಲಕ್ಷ್ಮೀ ರಾಮಚಂದ್ರ ಮೊಗೇರ  ವಿದುಷಿ ಪಟ್ಟಕ್ಕೆ ಭಾಜನಳಾಗಿದ್ದಾಳೆ.

ಈಕೆಯು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ(Mangalore University) ಎಂ ಎಸ್ಸಿ ಓದುತ್ತಿದ್ದು  ಕೆಸೆಟ್ ಪರೀಕ್ಷೆಯಲ್ಲಿಯೂ (Kset Exam) ಉತ್ತೀರ್ಣಳಾಗಿದ್ದಾಳೆ.  ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ (Bhatkal Urban Co Operative Bank) ಉದ್ಯೋಗಿ ರಾಮಚಂದ್ರ ಮೊಗೇರ ಹಾಗೂ ಶಿಕ್ಷಕಿ ಶಾರದಾ ಮೊಗೇರ ಇವರ ಪುತ್ರಿಯಾಗಿದ್ದಾಳೆ.

ಚಿಕ್ಕವಳಿರುವಾಗಲೇ ಧನಲಕ್ಷ್ಮಿ  ಶಿಕ್ಷಣದ ಜೊತೆಗೆ ಭಾಷಣ(Speech), ನಾಟಕ(Drama), ನೃತ್ಯ(Dance), ಹಾಡುಗಾರಿಕೆಯಲ್ಲಿ (Singing) ಮುಂಚೂಣಿಯಲ್ಲಿದ್ದಳು. ನಾಲ್ಕನೇ ವರ್ಷಕ್ಕೆ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ(St Thomas English Medium School) ಎಲ್. ಕೆ. ಜಿ ಶಿಕ್ಷಣ ಪ್ರಾರಂಭಿಸಿದಳು. ಅದೇ ವರ್ಷದಿಂದ ಶಿಕ್ಷಣದ ಜೊತೆಗೆ ಭರತನಾಟ್ಯ ಕಲಿಯಲು ಪ್ರಾರಂಭಿಸಿದಳು. ಅಂದಿನಿಂದಲೇ  ಭರತನಾಟ್ಯ ಕಾರ್ಯಕ್ರಮ ನೀಡುತ್ತಾ ಬಂದಿದ್ದಾಳೆ. ಐದನೇ ವರ್ಷ ಇರುವಾಗ ಇವಳಲ್ಲಿರುವ ಪ್ರತಿಭೆಯನ್ನು ಶ್ರೀಮತಿ ವಿದ್ಯಾ ಅಂಬಾದಾಸ್ ಇವರು ಗುರುತಿಸಿ ಪಾಲಕರಿಗೆ ತಿಳಿಸಿ ನೃತ್ಯ ಮತ್ತು ಸಂಗೀತ ಅಭ್ಯಾಸಕ್ಕೆ ಪ್ರೇರೆಪಿಸಿದರು.

ಭಟ್ಕಳದ ಝೇಂಕಾರ್ ಕಲಾ ಸಂಸ್ಥೆಯಲ್ಲಿ(Bhatkal Zhenkar Art School)  ನೃತ್ಯ ಮತ್ತು ಸಂಗೀತ ಅಭ್ಯಾಸ ಪ್ರಾರಂಭ ಮಾಡಿದಳು. ಭರತನಾಟ್ಯವನ್ನು ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ನಮ್ಮತ ರಾವ್ ಇವರಲ್ಲಿ ಜೂನಿಯರ್ ಶಿಕ್ಷಣವನ್ನ ಪಡೆದಳು. ಕರ್ನಾಟಕ ಸಂಗೀತವನ್ನು ವಿದ್ವಾನ್ ವೆಂಕಟೇಶ್ ಭಟ್ ಇವರಿಂದ ಜೂನಿಯರ್ ಮುಗಿಸಿರುತ್ತಾಳೆ. ನಂತರ ಸೀನಿಯರ್ ಮತ್ತು ವಿದ್ಯತ್ ಶಿಕ್ಷಣವನ್ನು ವಿದುಷಿ ನಯನಾ ಪ್ರಸನ್ನ ಪ್ರಭು ಇವರಿಂದ ಪಡೆದಿದ್ದಾಳೆ.

2012ರಲ್ಲಿ ಮಹಾರಾಷ್ಟ್ರ ಗಂಧರ್ವ ವಿಶ್ವವಿದ್ಯಾಲಯ(Maharashtra Gandarva University) ನಡೆಸುವ ನೃತ್ಯ ಪರೀಕ್ಷೆಯಲ್ಲಿ  5 ನೇ ತರಗತಿ ಇರುವಾಗಲೇ ಪ್ರಾರಂಭಿಕ ಪರೀಕ್ಷೆಯಲ್ಲಿ 88% ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ, 2013ರಲ್ಲಿ ಜೂನಿಯರ್ ಪರೀಕ್ಷೆಯಲ್ಲಿ 78% ಅಂಕ,  2014ರಲ್ಲಿ ಪ್ರಾವೇಶಿಕ ಪೂರ್ಣ 99% ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದಳು.

2015ರಲ್ಲಿ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ 71.25% ಅಂಕ,  2017ರಲ್ಲಿ ಎಸ್ಎಸ್ಎಲ್ಸಿ ಇರುವಾಗ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ 95% ಅಂಕ ಪಡೆದು ರಾಜ್ಯಕ್ಕೆ ಎರಡನೇ Rank ಬಂದಿರುತ್ತಾಳೆ. ಇದೇ ವರ್ಷ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಲ್ಲಿ ಭರತನಾಟ್ಯವನ್ನು ಪ್ರದರ್ಶಿಸಲಿದ್ದಾಳೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 97.28% ಅಂಕ ಪಡೆದು ತಾಲೂಕಿಗೆ 9ನೇ ಸ್ಥಾನ, 2018ರಲ್ಲಿ ಗಂಧರ್ವ ಮಧ್ಯಮ ಪೂರ್ಣ ಪರೀಕ್ಷೆಯಲ್ಲಿ 86.4% ಅಂಕ,  2019 ರಲ್ಲಿ ವಿಶಾರದ ಪ್ರಥಮ 77.7% ಅಂಕ ಪಡೆದು ಕೀರ್ತಿ ಹೆಚ್ಚಿಸಿದ ಧನಲಕ್ಷ್ಮೀ, ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97% ಅಂಕ ಪಡೆದು ತಾಲೂಕಿಗೆ ಪ್ರಥಮ ಜಿಲ್ಲೆಗೆ 6ನೇ Rank,  2020ರಲ್ಲಿ ವಿಶಾರದ ಪೂರ್ಣ ಪರೀಕ್ಷೆಯಲ್ಲಿ 84.5% ಅಂಕ, 2021 ರಲ್ಲಿ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ 90.4% ಅಂಕ, 2022 ರಲ್ಲಿ ಅಲಂಕಾರ ಪ್ರಥಮ 76.2% ಅಂಕ ಪಡೆದಿರುತ್ತಾಳೆ.

ಹೊನ್ನಾವರದ ಎಸ್ಡಿಎಮ್ ಕಾಲೇಜಿನಲ್ಲಿ(Honnavar SDM College) ಬಿಎಸ್ಸಿ ಶಿಕ್ಷಣ ಪಡೆದು  ಬಿಎಸ್ಸಿ ಅಂತಿಮ ಪರೀಕ್ಷೆಯಲ್ಲಿ 94.3% ಅಂಕ ಪಡೆದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರಾಂಕ್ ಪಡೆದು ಜಿಲ್ಲೆಗೆ ಕೀರ್ತಿ ಹೆಚ್ಚಿಸಿದ್ದಾಳೆ. 2023ರಲ್ಲಿ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ 79.4% ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ ಏಳನೇ Rank ಪಡೆದಿರುತ್ತಾಳೆ. ಮಂಗಳೂರು ವಿಶ್ವವಿದ್ಯಾಲಯ(Mangalore University) ಕೊಣಾಜೆಯಲ್ಲಿ ಎಂ ಎಸ್ ಸಿ ಶಿಕ್ಷಣವನ್ನು ಪಡೆಯುತ್ತ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 71.4% ಅಂಕ ಪಡೆದು ವಿದುಷಿ ಪಟ್ಟಕ್ಕೆ ಭಾಜನರಾಗುವುದರ ಜೊತೆಗೆ  ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾಳೆ.

ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಪಟ್ಯೆತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪರಿಶ್ರಮಪಟ್ಟು ಓದಿ ತಂದೆ-ತಾಯಿ, Zhenkar ಕಲಾಸಂಸ್ಥೆಗೆ ಹೆಸರು ತಂದಿದ್ದಾಳೆ. ಧನಲಕ್ಷ್ಮೀ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಇದನ್ನು ಓದಿ : ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ  ಭೇದಿಸಿದ ರೋಚಕ ಕಥೆ

ಬಿಗ್ ಬಾಸ್ ಗೆದ್ದ ಹನುಮಂತ ಹಣ ಏನು ಮಾಡ್ತಾರೆ ಗೊತ್ತಾ.

ಮಹಾ ಕುಂಭಮೇಳಕ್ಕೆ ತೆರಳಲು ಸಬ್ಸಿಡಿ ದರದಲ್ಲಿ ಟಿಕೆಟ್