ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಸಿದ್ದಾಪುರ(Siddapura) :  ಉತ್ತರ ಕನ್ನಡ(Uttarakannada) ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ(Avaraguppa Village) ನಡೆದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ನ್ಯಾಯಾಂಗ ಬಂಧನವನ್ನು(Judicial Custody) ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ.

ಇಂದು ನಡೆದ ವಿಚಾರಣೆಯಲ್ಲಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ(Siddapura JMFC Court) ನ್ಯಾಯಾಧೀಶರಾದ ಉಮೇಶ್ ಎಂ.ಪಿ ಅವರು ಈ ಆದೇಶ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದು, ಅವರಲ್ಲಿ ಮೂವರು ಪೊಲೀಸ್ ಕಸ್ಟಡಿಯಲ್ಲಿ(Police Custody) ಇದ್ದು ತನಿಖೆ ಮುಂದುವರಿಸಲಾಗಿದೆ. ಉಳಿದ ಐವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್(Video Conference) ಮೂಲಕ  ವಿಚಾರಣೆ ನಡೆಸಲಾಯಿತು.

ಸುಚಿತ್ರಾ, ಲೋಕನಾಥ್, ಕಮಲಾಕರ ಭಟ್, ಆಕಾಶ ಮತ್ತು ವಿನಯ ಸೇರಿದಂತೆ ಐದು ಮಂದಿಯ ನ್ಯಾಯಾಂಗ ಬಂಧನವನ್ನು(Judicial Custody) ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಇರುವ ಮೂವರು ಆರೋಪಿಗಳಾದ ಮಹಮದ್ ಮೈಪೂಜ್, ಇರ್ಪಾನ್ ಹಾಗೂ ಪೈಜಲ್ ಅವರ ವಿಚಾರಣೆಯನ್ನು ಫೆಬ್ರವರಿ 13ರಂದು ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಇದನ್ನು ಓದಿ : ಒಂಬತ್ತು ಯುವತಿಯರಿಗೆ  ವಂಚಿಸಿದ ಮ್ಯಾಟ್ರಿಮೋನಿ ಮನ್ಮಥನ ಬಂಧನ.

ರಾಘವೇಂದ್ರ ಜಿ. ಪ್ರಭು ಅವರಿಗೆ ಎಕ್ಸ್ಟ್ರೋರ್ಡಿನರಿ ಅಸಿಸ್ಟಂಟ್ ಗವರ್ನರ್ ಅವಾರ್ಡ್

ಪೊಲೀಸರ ಕಾರ್ಯಾಚರಣೆ. ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ.