ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿವಮೊಗ್ಗ(Shivamogga) : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ(Sharavati Pumped Storage Project) ಜಾರಿಗೊಳಿಸದಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಭಾರೀ ಪ್ರತಿಭಟನೆ ನಡೆಯಿತು.

ಗುರುವಾರ  ರಾಜ್ಯ ಸರ್ಕಾರದ(State Government) ವಿರುದ್ಧ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿ ಹೋರಾಟಗಾರರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಗೋಪಿವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನಾ ಜಾಥಾದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಯೋಜನೆ ಕೈಬಿಡುವಂತೆ ಒತ್ತಾಯಿಸಿದರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ(Former DCM Ishwarappa) ನೇತೃತ್ವದ ರಾಷ್ಟ್ರಭಕ್ತರ ಬಳಗ ಹಾಗೂ “ಪರಿಸರಕ್ಕಾಗಿ ನಾವು” ಸಮಿತಿಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಿದರು.

ರಾಜ್ಯ ಸರ್ಕಾರವು ಸುಮಾರು 10,500 ಕೋಟಿ ರೂಪಾಯಿ ವೆಚ್ಚದಲ್ಲಿ 2,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ(Sharavati Pumped Storage Project) ಜಾರಿಗೊಳಿಸಲು ಮುಂದಾಗಿದೆ. ಆದರೆ ಈ ಯೋಜನೆಯಿಂದ ಸುಮಾರು 17 ಸಾವಿರ ಮರಗಳು ನಾಶವಾಗಲಿದ್ದು, ಪಶ್ಚಿಮಘಟ್ಟಗಳ(Western Ghat) ಪರಿಸರ ಸಮತೋಲನಕ್ಕೆ ಗಂಭೀರ ಧಕ್ಕೆಯಾಗಲಿದೆ ಎಂದು ಹೋರಾಟಗಾರರು ಆರೋಪಿಸಿದರು.

ಯೋಜನೆಯ ಪರಿಣಾಮವಾಗಿ ಶರಾವತಿ ಕಣಿವೆಯಲ್ಲಿನ(Sharavati Value) ಸಿಂಗಳೀಕ ಹಾಗೂ ಇಂಡಿಯನ್ ಗ್ರೇಟ್ ಹಾರ್ನ್ ಬಿಲ್(Indian Great Hornbill) ಪಕ್ಷಿಗಳ ಆವಾಸಸ್ಥಾನ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಲೆನಾಡಿನ ಶಿವಮೊಗ್ಗ(Malnad Shivamogga) ಹಾಗೂ ಉತ್ತರ ಕನ್ನಡ(Uttarakannada) ಜಿಲ್ಲೆಗಳಿಗೆ ಈ ಯೋಜನೆ ಮಾರಕವಾಗಬಹುದು ಎಂದು ಅವರು ಎಚ್ಚರಿಸಿದರು.
ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಯನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಯೋಜನೆ ಹಿಂತೆಗೆದುಕೊಳ್ಳುವವರೆಗೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ(Western Chat Conservation) ಮಲೆನಾಡಿಗರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ : ಸಿದ್ದಾಪುರ ಕೊಲೆ ಪ್ರಕರಣ: ಜ್ಯೋತಿಷಿ ಸೇರಿ ಐವರಿಗೆ  ನ್ಯಾಯಾಂಗ ಬಂಧನ ವಿಸ್ತರಣೆ

ಒಂಬತ್ತು ಯುವತಿಯರಿಗೆ  ವಂಚಿಸಿದ ಮ್ಯಾಟ್ರಿಮೋನಿ ಮನ್ಮಥನ ಬಂಧನ.