ಮಂಗಳೂರು(MANGLORE) : ಆಳ ಸಮುದ್ರ(DEEP SEA) ಮೀನುಗಾರಿಕೆ ತೆರಳಿದ್ದ ಬೋಟ್ ಒಂದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಘಟನೆ ನಡೆದಿದೆ.

ಇದನ್ನು ಓದಿ. ನಗರಸಭೆ ಅಧಿಕಾರಿಗಳೇ ಇಲ್ಲಿ ಕಣ್ತೆರೆದು ನೋಡಿ. ಮೊಸಳೆಗಳಿದ್ದ ಸ್ಥಳಕ್ಕೆ ತೆರಳಿ ವಿದ್ಯುತ್ ದುರಸ್ತಿ. ಮಳೆಗಾಗಿ ಹೆಣ್ಣು ಹೆಣ್ಣುಗಳ ಮದುವೆ. ಈಶ್ವರ್ ಮಲ್ಪೆ ಶೋಧ ಕಾರ್ಯಾಚರಣೆ

ಮೀನುಗಾರಿಕೆಯ ಆರಂಭದಲ್ಲೇ ಆಳ ಸಮುದ್ರದಲ್ಲಿ  ಅವಘಡ ಸಂಭವಿಸಿರುವುದು ಕಡಲ ಮಕ್ಕಳನ್ನ(FISHERMENS) ಕಂಗೆಡಿಸಿದೆ. ಮಂಗಳೂರು ಬಂದರು (MANGLORE PORT) ಪ್ರದೇಶದಿಂದ ಸುಮಾರು 88 ನಾಟಿಕಲ್ ಮೈಲು ದೂರದಲ್ಲಿ‌ ಈ ಘಟನೆ ನಡೆದಿದೆ.

ಹುಸೈನ್ ಎಂಬುವವರಿಗೆ ಸೇರಿದ ಸಫವಿ ಹೆಸರಿನ ಬೋಟ್  ಬೆಂಕಿಗಾಹುತಿಯಾಗಿದೆ. ನಿನ್ನೆ ಭಾನುವಾರ (SUNDAY) ಮಂಗಳೂರು ಮೀನುಗಾರಿಕಾ ಬಂದರ್ (FISHING PORT) ನಿಂದ ಬೋಟ್ ಮೀನುಗಾರಿಕೆಗೆ ಹೊರಟಿತ್ತು. ಇಂದು ಆಳ ಸಮುದ್ರದಲ್ಲಿ ಏಕಾಏಕಿ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿಯ ರಭಸಕ್ಕೆ ಇಡೀ ಬೋಟ್ ಗೆ ಬೆಂಕಿ ಆವರಿಸಿಕೊಂಡಿತು.

ಘಟನೆ ಸಂದರ್ಭದಲ್ಲಿ ಬೋಟ್ ನಲ್ಲಿದ್ದ 10 ಮೀನುಗಾರರನ್ನ ರಕ್ಷಣೆ(RESCUE) ಇನ್ನೊಂದು ಬೋಟ್ ನ ಮೀನುಗಾರರು ರಕ್ಷಿಸಿದ್ದಾರೆ. ಘಟನೆಯಿಂದ ಲಕ್ಷಾಂತರ ರೂ. ಹಾನಿಯಾಗಿದೆ.